×
Ad

ಇಂಗ್ಲೆಂಡ್ ವಿರುದ್ಧ ಕಿವೀಸ್‌ಗೆ ಇನಿಂಗ್ಸ್, 65 ರನ್ ಜಯ

Update: 2019-11-25 23:48 IST

ವೆಲ್ಲಿಂಗ್ಟನ್, ನ.25: ಮೊದಲ ಟೆಸ್ಟ್‌ನ ಅಂತಿಮ ದಿನವಾದ ಸೋಮವಾರ ಟೀ ವಿರಾಮದ ಬಳಿಕ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 65 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

3 ವಿಕೆಟ್‌ಗಳ ನಷ್ಟಕ್ಕೆ 55 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ 96.2 ಓವರ್‌ಗಳಲ್ಲಿ 197 ರನ್‌ಗೆ ಆಲೌಟಾಯಿತು. ಡೆನ್ಲಿ(35)ಸರ್ವಾಧಿಕ ಸ್ಕೋರ್ ಗಳಿಸಿದರು.

ಟೀ ವಿರಾಮಕ್ಕೆ ಮೊದಲು 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ನೀಲ್ ವಾಗ್ನರ್(5-44) ದಾಳಿಗೆ ಸಿಲುಕಿ 17 ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. 9ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದ ಜೋಫ್ರಾ ಆರ್ಚರ್(30) ಹಾಗೂ ಸ್ಯಾಮ್ ಕರನ್(ಔಟಾಗದೆ 29) ಆತಿಥೇಯರಿಗೆ ಭೀತಿ ಹುಟ್ಟಿಸಿದ್ದರು. ಎಡಗೈ ವೇಗದ ಬೌಲರ್ ವಾಗ್ನರ್, ಸ್ಟುವರ್ಟ್ ಬ್ರಾಡ್(0)ವಿಕೆಟನ್ನು ಬೇಗನೆ ಉರುಳಿಸಿ ಇಂಗ್ಲೆಂಡ್‌ನ್ನು 2ನೇ ಇನಿಂಗ್ಸ್‌ನಲ್ಲಿ 197 ರನ್‌ಗೆ ನಿಯಂತ್ರಿಸಿದರು. ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 615 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್ ಪರ ಚೊಚ್ಚಲ ದ್ವಿಶತಕ ಸಿಡಿಸಿದ್ದ ವಿಕೆಟ್‌ಕೀಪರ್ ಬಿ.ಜೆ .ವಾಟ್ಲಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News