ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದರೆ ಧೋನಿಗೆ ವಿಶ್ವಕಪ್‌ನಲ್ಲಿ ಅವಕಾಶ: ಶಾಸ್ತ್ರಿ

Update: 2019-11-26 18:00 GMT

ಕೋಲ್ಕತಾ, ನ.26: ಮ್ಯಾಂಚೆಸ್ಟರ್‌ನಲ್ಲಿ ನ್ಯೂಝಿಲ್ಯಾಂಡ್‌ನ ವೇಗದ ಬೌಲರ್‌ಗಳು 15 ನಿಮಿಷಗಳಲ್ಲಿ ಎಲ್ಲವನ್ನೂ ಬದಲಾಯಿಸುವ ಮೊದಲು ಭಾರತ 2019ರ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಒಂದಾಗಿತ್ತು. ಭಾರತ ತಂಡವನ್ನು ಇದೀಗ 1970 ಮತ್ತು 1980ರ ದಶಕಗಳಲ್ಲಿ ಇದ್ದ ಬಲಿಷ್ಠ ವಿಂಡೀಸ್ ತಂಡಕ್ಕೆ ಹೋಲಿಸಲಾಗುತ್ತಿದೆ.

ಬಾಂಗ್ಲಾ ವಿರುದ್ಧ ಟೆಸ್ಟ್‌ನಲ್ಲಿ ಸರಣಿ ಗೆಲುವಿನ ಬಳಿಕ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಭಾರತ ಕೋಚ್ ರವಿ ಶಾಸ್ತ್ರಿ ‘‘ಭಾರತ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡವಾಗಿ ಇದೀಗ ಗುರುತಿಸಿಕೊಂಡಿದೆ. ರಿಷಭ್ ಪಂತ್ ಅವರನ್ನು ಧೋನಿಯ ಉತ್ತರಾಧಿಕಾರಿಯಾಗಿ ರೂಪಿಸುವ ಸವಾಲು ಇದೆ. ತಾನು ಕೋಚ್ ಆಗಿ ಮುಖ್ಯವಾಗಿ ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದನ್ನು ನೋಡುವ ಅವಕಾಶ ಸಿಕ್ಕಿದೆ.

ವಿಶ್ವಕಪ್ ನಿರ್ಗಮನವು ಅದೊಂದು ಕಹಿ ಅನುಭವ. ನನ್ನ ಮಟ್ಟಿಗೆ, ಈ ತಂಡವು ತೋರಿಸಿದ ಪ್ರದರ್ಶನ ಅದ್ಭುತವಾಗಿದೆ. ಕಳೆದ ಐದಾರು ವರ್ಷಗಳ ಹಿಂದಕ್ಕೆ ನೋಡಿದರೆ ಈಗಿನ ತಂಡ ಎಲ್ಲಾ ಪ್ರಕಾರದ ಕ್ರಿಕೆಟ್‌ನಲ್ಲೂ ಇದುವರೆಗಿನ ಸ್ಥಿರ ಪ್ರದರ್ಶನ ನೀಡುವ ಅತ್ಯಂತ ಬಲಿಷ್ಠ ತಂಡವಾಗಿದೆ ಎಂದರು.

ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ 2020 ರಲ್ಲಿ ವಿಶ್ವ ಟ್ವೆಂಟಿ-20 ವಿಶ್ವಕಪ್ ಗೆಲ್ಲುವ ಸವಾಲು ಇದೆ. ಆದರೆ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ ಎಂ.ಎಸ್. ಧೋನಿ ಆ ವಿಶ್ವಕಪ್‌ನಲ್ಲಿ ಭಾಗವಹಿಸಲು ವಿಮಾನ ಏರಲಿದ್ದಾರೋ ? ಎನ್ನುವುದು. ಆದರೆ ಈ ಬಗ್ಗೆ ಗೊತ್ತಾಗಲು ಐಪಿಎಲ್ ತನಕ ಎಲ್ಲರೂ ಕಾಯಬೇಕೆಂದು ತಾನು ಬಯಸಿರುವುದಾಗಿ ಶಾಸ್ತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News