ಮಿಡ್ಲ್ ಸ್ಟಂಪ್ ಮುರಿದ ಜಸ್ಪ್ರೀತ್ ಬುಮ್ರಾ

Update: 2019-11-26 18:14 GMT

ಹೊಸದಿಲ್ಲಿ, ನ.26: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ಕ್ರಿಕೆಟ್‌ಗೆ ವಾಪಸಾಗಲು ಅಭ್ಯಾಸ ಆರಂಭಿಸಿದ್ದಾರೆ. ಮಂಗಳವಾರ ತನ್ನ ಅಭ್ಯಾಸದ ವೇಳೆ ತನ್ನ ದಾಳಿಗೆ ಸಿಲುಕಿ ಮಿಡ್ಲ್ ಸ್ಟಂಪ್ ಮುರಿದು ಬಿದ್ದ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ

 ಗಾಯದಿಂದ ಚೇತರಿಸಿಕೊಂಡಿರುವ ಬುಮ್ರಾ 2020 ರ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ. 2019 ರ ಸೆಪ್ಟೆಂಬರ್‌ನಲ್ಲಿ ಗಾಯದ ಕಾರಣದಿಂದಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಬುಮ್ರಾ ಶೀಘ್ರದಲ್ಲೇ ವಾಪಸಾಗುವ ನಿರೀಕ್ಷೆಯಿದೆ. ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯು ಅವರಿಗೆ ದೊಡ್ಡ ಸವಾಲಾಗಿದೆ ಎಂದು ಕೋಚ್ ಭರತ್ ಅರುಣ್ ಹೇಳಿದ್ದಾರೆ.

ಬುಮ್ರಾ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದೂ ಹೇಳಿದರು. ವಿಶೇಷವೆಂದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಮುಖ್ಯ ಫಿಜಿಯೊ ಆಶಿಶ್ ಕೌಶಿಕ್ ಅವರೊಂದಿಗೆ ಗಾಯದ ಬಗ್ಗೆ ತಿಳಿಯಲು ಇಂಗ್ಲೆಂಡ್‌ಗೆ ಹೋಗಿದ್ದರು. ಭಾರತ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ 2-0 ಟೆಸ್ಟ್ ಸರಣಿಯ ಗೆಲುವಿನ ಸಂದರ್ಭದಲ್ಲಿ ಬುಮ್ರಾ ಇರಲಿಲ್ಲ. ಆದಾಗ್ಯೂ, ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವು ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಮುಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ನೇತೃತ್ವದಲ್ಲಿ ಭರ್ಜರಿ ಜಯ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News