ಕಾಡಿಗೆ ಬೆಂಕಿ ಕೊಟ್ಟು ನಂದಿಸಲು ಬರುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ !

Update: 2019-11-27 14:41 GMT
ಸಾಂದರ್ಭಿಕ ಚಿತ್ರ

ಸಿಡ್ನಿ, ನ. 27: ಆಸ್ಟ್ರೇಲಿಯದಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚಿಗೆ ಸಂಬಂಧಿಸಿ ಆ ದೇಶದ ಪೊಲೀಸರು ಬುಧವಾರ ಅಗ್ನಿಶಾಮಕ ಸಿಬ್ಬಂದಿಯೊಬ್ಬನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಅವನು ಏಳು ಕಡೆ ಕಾಡಿಗೆ ಬೆಂಕಿ ಹಚ್ಚಿದ್ದಾನೆ ಹಾಗೂ ಬಳಿಕ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹೋದ್ಯೋಗಿಗಳಿಗೆ ನೆರವು ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

19 ವರ್ಷದ ಸ್ವಯಂಸೇವಕ ಅಗ್ನಿಶಾಮಕನು ನ್ಯೂಸೌತ್‌ವೇಲ್ಸ್ ರಾಜ್ಯದ ದಕ್ಷಿಣ ಕರಾವಳಿಯಲ್ಲಿ ಅಕ್ಟೋಬರ್ ಮಧ್ಯ ಭಾಗ ಮತ್ತು ನವೆಂಬರ್ ಕೊನೆಯ ನಡುವೆ ಏಳು ಬಾರಿ ಕಾಡಿಗೆ ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ನ್ಯೂಸೌತ್‌ವೇಲ್ಸ್ ರಾಜ್ಯವು ಕಾಡ್ಗಿಚ್ಚಿನ ಅತ್ಯಂತ ಭೀಕರ ಪರಿಣಾಮವನ್ನು ಎದುರಿಸುತ್ತಿದೆ.

ಮಂಗಳವಾರ ಅಪರಾಹ್ನ ಹೊಸದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದಕ್ಕಿಂತ ಮುಂಚೆ ಆ ಸ್ಥಳದಲ್ಲಿ ಆ ವ್ಯಕ್ತಿಯು ವಾಹನವೊಂದರಲ್ಲಿ ಕುಳಿತಿದ್ದನ್ನು ಜನರು ನೋಡಿದ್ದಾರೆ.

‘‘ಈ ವ್ಯಕ್ತಿಯು ಬೆಂಕಿ ಹೊತ್ತಿಸುತ್ತಾನೆ ಹಾಗೂ ಅಲ್ಲಿಂದ ಹೋಗುತ್ತಾನೆ. ಬಳಿಕ ಸ್ವಯಂಸೇವಕ ಅಗ್ನಿಶಾಮಕನ ಕರ್ತವ್ಯದ ಭಾಗವಾಗಿ ಬೆಂಕಿ ನಂದಿಸಲು ಅಲ್ಲಿಗೆ ಹಿಂದಿರುಗುತ್ತಾನೆ’’ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News