ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಟ ಸಾವು

Update: 2019-11-27 14:47 GMT
ಫೋಟೊ : Twitter 

ಬೀಜಿಂಗ್, ನ. 27: ತೈವಾನೀಸ್-ಕೆನಡಿಯನ್ ನಟ ಹಾಗೂ ಸೂಪರ್‌ಮೋಡೆಲ್ ಗಾಡ್‌ಫ್ರೇ ಗಾವೊ ಬುಧವಾರ ಚೀನಾದಲ್ಲಿ ಟಿವಿ ಕಾರ್ಯಕ್ರಮವೊಂದನ್ನು ಚಿತ್ರಿಸುತ್ತಿದ್ದ ವೇಳೆ ನಿಧನರಾಗಿದ್ದಾರೆ.

ಚೀನಾದ ಝೆಜಿಯಾಂಗ್ ಟೆಲಿವಿಶನ್‌ನ ಸ್ಪರ್ಧಾತ್ಮಕ ಕ್ರೀಡಾ ರಿಯಾಲಿಟಿ ಶೋ ಕಾರ್ಯಕ್ರಮ ‘ಚೇಸ್ ಮೀ’ಗಾಗಿ ನಿಂಗ್ಬೊ ನಗರದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ 35 ವರ್ಷದ ನಟ ಕುಸಿದರು ಎಂದು ಏಜನ್ಸಿ ಪ್ರಾನ್ಸ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚಿತ್ರೀಕರಣದ ವೇಳೆ ಓಡುತ್ತಿದ್ದಾಗ ಅವರ ವೇಗ ಕಡಿಮೆಯಾಯಿತು ಹಾಗೂ ಬಳಿಕ ನೆಲಕ್ಕೆ ಕುಸಿದರು. ಅವರು ದಿಢೀರ್ ಹೃದಯಾಘಾತದಿಂದ ಮೃತಪಟ್ಟರು ಎಂಬುದಾಗಿ ಬಳಿಕ ಆಸ್ಪತ್ರೆಯು ಖಚಿತಪಡಿಸಿತು ಎಂದು ಟಿವಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಫ್ರಾನ್ಸ್‌ನ ಲೂಯಿಸ್ ವೂಟನ್ ಫ್ಯಾಶನ್ ಕಂಪೆನಿಯಲ್ಲಿ ಅವರು ಏಶ್ಯದ ಮೊದಲ ರೂಪದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News