×
Ad

ಸಾಂಟಾ ಬಾರ್ಬರಾ ನಗರದತ್ತ ಧಾವಿಸಿ ಬರುತ್ತಿರುವ ಕಾಡ್ಗಿಚ್ಚು

Update: 2019-11-27 20:18 IST

ಸಾಂಟಾ ಬಾರ್ಬರಾ (ಅಮೆರಿಕ), ನ. 27: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸಮೀಪದ ಕಾಡಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯು ಗಾಳಿಯ ಸೆಳೆತಕ್ಕೆ ಸಿಕ್ಕಿ ಸಾಂಟಾ ಬಾರ್ಬರಾ ನಗರದತ್ತ ಧಾವಿಸಿ ಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 5,500 ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ.

ಗುಹಾ ಬೆಂಕಿ ಎಂಬುದಾಗಿ ಕರೆಯಲ್ಪಟ್ಟಿರುವ ಬೆಂಕಿಯು ಸೋಮವಾರ ಸಂಜೆ ಸಾಂಟಾ ಬಾರ್ಬರಾ ಕೌಂಟಿಯ ಲಾಸ್ ಪ್ಯಾಡ್ರಸ್ ನ್ಯಾಶನಲ್ ಫಾರೆಸ್ಟ್‌ನಲ್ಲಿ ಆರಂಭಗೊಂಡಿತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಂಕಿಯು ಸುಮಾರು 18 ಚದರ ಕಿಲೋಮೀಟರ್ ಅರಣ್ಯವನ್ನು ಸುಟ್ಟು ಹಾಕಿದೆ. ಈ ಪ್ರದೇಶದಲ್ಲಿ ಗಾಳಿಯು ಗಂಟೆಗೆ 72 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು ಬೆಂಕಿಯು ವೇಗವಾಗಿ ಹರಡುತ್ತಿದೆ.

ಹೆಲಿಕಾಪ್ಟರ್‌ಗಳು ಮತ್ತು ವಾಯು ಟ್ಯಾಂಕರ್‌ಗಳ ಮೂಲಕ ಬೆಂಕಿಯನ್ನು ನಂದಿಸಲು ಶ್ರಮಿಸಲಾಗುತ್ತಿದೆ. ನೆಲದಲ್ಲಿ 600ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News