2023ರ ಹಾಕಿ ವಿಶ್ವಕಪ್‌ಗೆ ಒಡಿಶಾ ಆತಿಥ್ಯ

Update: 2019-11-27 17:58 GMT

ಭುವನೇಶ್ವರ, ನ.27: ಭಾರತೀಯ ಹಾಕಿಯ ತವರೂರು ಎನಿಸಿಕೊಂಡಿರುವ ಒಡಿಶಾ 2023ರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಮತ್ತೊಮ್ಮೆ ಆತಿಥ್ಯವಹಿಸಿಕೊಳ್ಳಲಿದೆ. 2018ರ ಆವೃತ್ತಿಯ ವಿಶ್ವಕಪ್‌ನ್ನು ಒಡಿಶಾ ಆಯೋಜಿಸಿತ್ತು. ಆಗ ಬೆಲ್ಜಿ ಯಂ ಚಾಂಪಿಯನ್ ಆಗಿತ್ತು.

ಮುಂಬರುವ ವಿಶ್ವಕಪ್ ಪಂದ್ಯವನ್ನು ಎರಡು ನಗರಗಳಾದ ಭುವನೇಶ್ವರ ಹಾಗೂ ರೂರ್ಕೆಲಾದಲ್ಲಿ ನಡೆಯಲಿದೆ. ಕಳಿಂಗ ಸ್ಟೇಡಿಯಂನಲ್ಲಿ 15,000 ಪ್ರೇಕ್ಷಕರ ಸಮ್ಮುಖದಲ್ಲಿ ಬುಧವಾರ ನಡೆದ ಭವ್ಯ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ತಿಂಗಳಾರಂಭದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಭಾರತೀಯ ಪುರುಷರ ಹಾಕಿ ತಂಡ ಕಳಿಂಗ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News