ಹೆಲ್ಮೆಟ್ ಧರಿಸಿ ಬೌಲಿಂಗ್ ಮಾಡಿದ ನ್ಯೂಝಿಲ್ಯಾಂಡ್ ಕ್ರಿಕೆಟಿಗ ಎಲ್ಲಿಸ್!

Update: 2019-11-27 18:00 GMT

ವೆಲ್ಲಿಂಗ್ಟನ್, ನ.27: ಕಳೆದ ವರ್ಷ ತಲೆಗೆ ಚೆಂಡಿನ ಏಟು ತಿಂದಿದ್ದ ನ್ಯೂಝಿಲ್ಯಾಂಡ್ ಕ್ರಿಕೆಟಿಗ ಆ್ಯಂಡ್ರೂ ಎಲ್ಲಿಸ್ ಈ ಬಾರಿ ತನಗೆ ಒಪ್ಪುವಂತಹ ಹೆಲ್ಮೆಟ್‌ನ್ನು ಧರಿಸಿ ಬೌಲಿಂಗ್ ಮಾಡಲಾರಂಭಿಸಿದ್ದಾರೆ. ನ್ಯೂಝಿಲ್ಯಾಂಡ್ ಪರ 15 ಏಕದಿನ ಹಾಗೂ 5 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದ ಎಲ್ಲಿಸ್ ಬುಧವಾರ ಫೋರ್ಡ್ ಟ್ರೋಫಿಗಾಗಿ ನಡೆಯುತ್ತಿರುವ ಕ್ಯಾಂಟರ್‌ಬರಿ ಹಾಗೂ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ನಡುವಿನ ಪಂದ್ಯದಲ್ಲಿ ಹೆಲ್ಮೆಟ್ ಧರಿಸಿ ಬೌಲಿಂಗ್ ಮಾಡಿದರು. ಕ್ರಿಕೆಟ್‌ಗಿಂತಲೂ ಬೇಸ್‌ವಾಲ್ ಆಡುವಾಗ ಸಾಮಾನ್ಯವಾಗಿ ಮೈದಾನದಲ್ಲಿ ಹೆಲ್ಮೆಟ್ ಧರಿಸಿ ಆಡಲಾಗುತ್ತದೆ. ಕಳೆದ ವರ್ಷ ಜೀತ್ ರಾವಲ್ ಅವರ ಎಸೆತವೊಂದು ಎಲ್ಲಿಸ್ ತಲೆಗೆ ಅಪ್ಪಳಿಸಿತ್ತು. ರಭಸದಿಂದ ಹೆಲ್ಮೆಟ್‌ಗೆ ಅಪ್ಪಳಿಸಿ ಬೌನ್ಸ್ ಆಗಿದ್ದ ಚೆಂಡು ಸಿಕ್ಸರ್‌ಗೆ ಚಿಮ್ಮಿತ್ತು. ಚೆಂಡಿನ ಏಟಿಗೆ ಸ್ವಲ್ಪ ಕಾಲ ಪ್ರಜ್ಞೆ ಕಳೆದುಕೊಂಡಿದ್ದ ಎಲ್ಲಿಸ್ ಬಳಿಕ ಬ್ಯಾಟಿಂಗ್ ಮುಂದುವರಿಸಿದ್ದರು. 2017ರ ಡಿಸೆಂಬರ್‌ನಲ್ಲಿ ಒಟಾಗೊ ವೇಗದ ಬೌಲರ್ ವಾರ್ರೆನ್ ಬಾರ್ನೆಸ್ ಬೌಲಿಂಗ್ ಮಾಡುವಾಗ ಹೆಲ್ಮೆಟ್ ಧರಿಸಿದ ಮೊದಲ ಬೌಲರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News