ಡಿ.19ರಂದು ಕೋಲ್ಕತಾದಲ್ಲಿ ಮೊದಲ ಬಾರಿ ಐಪಿಎಲ್ ಆಟಗಾರರ ಹರಾಜು

Update: 2019-11-27 18:03 GMT

ಕೋಲ್ಕತಾ, ನ.27: ಮುಂದಿನ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜು ಇದೇ ಮೊದಲ ಬಾರಿ ಕೋಲ್ಕತಾದಲ್ಲಿ ಡಿಸೆಂಬರ್ 19ರಂದು ನಡೆಯಲಿದೆ.

8 ಫ್ರಾಂಚೈಸಿ ತಂಡಗಳು 71 ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿವೆ . 127 ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಈ ಪೈಕಿ 35 ವಿದೇಶಿ ಆಟಗಾರರು ತಾವು ಹಿಂದೆ ಆಡಿರುವ ತಂಡಗಳಲ್ಲಿ ಅವಕಾಶ ದೃಢಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಒಟ್ಟು 12 ಆಟಗಾರರನ್ನು ಬಿಡುಗಡೆಗೊಳಿಸಿದೆ. ಹರಾಜಿಗೆ ಗರಿಷ್ಠ ಆಟಗಾರರನ್ನು ಬಿಡುಗಡೆಗೊಳಿಸಿದ ತಂಡವಾಗಿದೆ ಆರ್‌ಸಿಬಿ. ಅತಿ ಕಡಿಮೆ ಆಟಗಾರರನ್ನು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟುಕೊಟ್ಟಿದೆ. ಎಂ.ಎಸ್.ಧೋನಿ (ನಾಯಕ), ಸುರೇಶ್ ರೈನಾ, ಎಫ್ ಡು ಪ್ಲೆಸಿಸ್, ಎಂ ವಿಜಯ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಲುಂಗಿ ಗಿಡಿ, ಕೇದಾರ್ ಜಾಧವ್, ಅಂಬಾಟಿ ರಾಯುಡು, ನಾರಾಯಣ್ ಜಗದೀಶನ್, ಹರ್ಭಜನ್ ಸಿಂಗ್, ಕೆಎಂ ಆಸೀಫ್, ಶಾರ್ದುಲ್ ಠಾಕೂರ್, ಇಮ್ರಾನ್ ತಾಹಿರ್, ಋತುರಾಜ್ ಗಾಯಕ್ವಾಡ್ , ದೀಪಕ್ ಚಹರ್, ಮೋನು ಕುಮಾರ್, ಕರಣ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ತನ್ನಲ್ಲೇ ಉಳಿಸಿಕೊಂಡಿದೆ.

ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್ ವಿಲ್ಲಿ, ಮೋಹಿತ್ ಶರ್ಮಾ, ಧ್ರುವ್ ಶೋರೆ ಮತ್ತು ಚೈತನ್ಯ ಬಿಷ್ಣೋಯ್ ಬಿಡುಗಡೆಯಾದ ಚೆನ್ನೈ ತಂಡದ ಆಟಗಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News