ಮುಸ್ಲಿಮರ ಮೇಲೆ ಚೀನಾ ದಬ್ಬಾಳಿಕೆ ಬಗ್ಗೆ ವಿಡಿಯೋ: ಯುವತಿಗೆ ಹೇರಿದ್ದ ನಿಷೇಧ ಹಿಂಪಡೆದ 'ಟಿಕ್‍ ಟಾಕ್'

Update: 2019-11-28 10:09 GMT

ಶಾಂಘೈ, ನ.28: ಚೀನಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಸಾಮೂಹಿಕ ನಿರ್ಬಂಧ ಹೇರಿರುವ ಬಗೆಗಿನ ಅಂಶವನ್ನು ಚರ್ಚಿಸಿದ ವಿಡಿಯೊ ತುಣುಕು ಪೋಸ್ಟ್ ಮಾಡಿದ್ದ ಅಮೆರಿಕದ ಯುವತಿ ಮೇಲೆ ಹೇರಿದ್ದ ನಿಷೇಧವನ್ನು ವಿಡಿಯೊ ಆ್ಯಪ್ ಟಿಕ್‍ ಟಾಕ್ ಹಿಂದೆಗೆದಿದೆ.

ವ್ಯವಸ್ಥೆಯ ಆಧುನೀಕರಣದ ವೇಳೆ ಆಕೆಯ ಖಾತೆ ರದ್ದಾಗಿತ್ತು ಎಂದು ಅದು ಸಬೂಬು ಹೇಳಿದೆ. ಈ ಘಟನೆಯು ಚೀನಾದ ತಂತ್ರಜ್ಞಾನ ದಿಗ್ಗಜ ಬೈಟ್‍ ಡ್ಯಾನ್ಸ್ ಮಾಲಕತ್ವದ ಸಂಸ್ಥೆಯ ಬಗ್ಗೆ ಹೊಸ ಆತಂಕ ಮೂಡಲು ಕಾರಣವಾಗಿದ್ದು, ಬೀಜಿಂಗ್ ನ ಸೆನ್ಸಾರ್ ನಿರ್ದೇಶನಗಳನ್ನು ಟಿಕ್‍ ಟಾಕ್ ಪಾಲಿಸುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಫೆರೋಝಾ ಅಝೀಝ್ (17) ಎಂಬ ಯುವತಿಗೆ ಟಿಕ್ ಟಾಕ್ ನಿಷೇಧ ಹೇರಿತ್ತು. ಚೀನಾದ ಬಂಧನ ಶಿಬಿರಗಳ ಬಗೆಗಿನ ವಿಡಿಯೊ ಪೋಸ್ಟ್ ಮಾಡಿರುವುದು ಇದಕ್ಕೆ ಕಾರಣವಲ್ಲ. ಉಸಾಮ ಬಿನ್ ಲಾದನ್ ಫೋಟೊ ಒಳಗೊಂಡ ವಿಡಿಯೋ ಪೋಸ್ಟ್ ಮಾಡಲು ಆಕೆ ಹಿಂದಿನ ಖಾತೆಯನ್ನು ಬಳಸಿದ್ದು ಕಾರಣ ಎಂದು ಟಿಕ್‍ ಟಾಕ್ ಹೇಳಿತ್ತು.

ಆ ಖಾತೆಯನ್ನು ಟಿಕ್‍ ಟಾಕ್ ನಿಷೇಧಿಸಿದ ಬಳಿಕ ಅಝೀಝ್ ಇನ್ನೊಂದು ಖಾತೆಯನ್ನು ಬಳಸಿ ಚೀನಾದ ಮುಸ್ಲಿಮರ ಸ್ಥಿತಿಗತಿ ಬಗ್ಗೆ ವಿಡಿಯೊ ಪೋಸ್ಟ್ ಮಾಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಟಿಕ್‍ ಟಾಕ್ ಸೋಮವಾರ 2,400ಕ್ಕೂ ಬಳಕೆದಾರರನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News