ಲಥಾಮ್ ಶತಕ: ನ್ಯೂಝಿಲ್ಯಾಂಡ್ 173/3

Update: 2019-11-29 17:56 GMT

ಹ್ಯಾಮಿಲ್ಟನ್, ನ.29: ಆರಂಭಿಕ ಬ್ಯಾಟ್ಸ್ ಮನ್ ಟಾಮ್ ಲಥಾಮ್ ಅಜೇಯ ಶತಕದ(101)ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿದೆ.

ಮಳೆಯಿಂದಾಗಿ ಮೊದಲ ದಿನದ ಪಂದ್ಯ ಬೇಗನೆ ಕೊನೆಗೊಂಡಿತು. ಎಡಗೈ ಆರಂಭಿಕ ಆಟಗಾರ ಲಥಾಮ್ 11ನೇ ಶತಕ ಗಳಿಸಿದರು. ಕಿವೀಸ್ ಪರ ಗರಿಷ್ಠ ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದರು. ನಾಯಕ ಕೇನ್ ವಿಲಿಯಮ್ಸನ್(20)ಗರಿಷ್ಠ ಶತಕಗಳನ್ನು ಗಳಿಸಿದ್ದಾರೆ. ಕಿವೀಸ್ 39 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಮೂರನೇ ವಿಕೆಟ್‌ಗೆ ರಾಸ್ ಟೇಲರ್ ಜೊತೆಗೆ 116 ರನ್ ಜೊತೆಯಾಟ ನಡೆಸಿದ ಲಥಾಮ್ ಕಿವೀಸ್ 3 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲು ನೆರವಾದರು.

ವೋಕ್ಸ್(2-41) ಯಶಸ್ವಿ ಬೌಲರ್ ಎನಿಸಿಕೊಂಡರು. ಕಿವೀಸ್ ಪಾಳಯದಲ್ಲಿ ಪತನಗೊಂಡ ಎಲ್ಲ ಮೂರು ಕ್ಯಾಚ್‌ಗಳನ್ನು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಪಡೆದಿದ್ದಾರೆ.

ಲಥಾಮ್ 164 ಎಸೆತಗಳಲ್ಲಿ 15 ಬೌಂಡರಿಗಳ ಬಲದಿಂದ ಔಟಾಗದೆ 101 ರನ್ ಗಳಿಸಿದರು. ಟೇಲರ್ ಅರ್ಧಶತಕ (53)ಗಳಿಸಲು 100 ಎಸೆತಗಳನ್ನು ಎದುರಿಸಿದ್ದು, ಇದರಲ್ಲಿ 8 ಬೌಂಡರಿಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News