ಕಳಿಂಗ ಸ್ಟೇಡಿಯಂ ಪರಿಶೀಲಿಸಿದ ಫಿಫಾ ನಿಯೋಗ

Update: 2019-11-29 17:59 GMT

ಭುವನೇಶ್ವರ, ನ.29: ಮುಂದಿನ ವರ್ಷದ ಅಂಡರ್-17 ವನಿತೆಯರ ವಿಶ್ವಕಪ್ ಆಯೋಜನೆಗೆ ತಾತ್ಕಾಲಿಕವಾಗಿ ಮಾನ್ಯತೆ ಪಡೆದಿರುವ ಇಲ್ಲಿನ ಕಳಿಂಗ ಸ್ಟೇಡಿಯಂಗೆ ಆಗಮಿಸಿ ಫಿಫಾ ನಿಯೋಗ ಶುಕ್ರವಾರ ಮತ್ತೊಮ್ಮೆ ಪರಿಶೀಲನೆ ನಡೆಸಿತು. ಜಾಗತಿಕ ಟೂರ್ನಿಗೆ ಸಜ್ಜಾಗುತ್ತಿರುವ ಸ್ಟೇಡಿಯಂನ ಪ್ರಗತಿ ಹಾಗೂ ತಯಾರಿಯನ್ನು ವೌಲ್ಯಮಾಪನ ನಡೆಸಿತು.

ಫಿಫಾ ನಿಯೋಗದಲ್ಲಿ 2020ರ ಅಂಡರ್-17 ವನಿತೆಯರ ವಿಶ್ವಕಪ್‌ನ ಸ್ಥಳೀಯ ಸಂಘಟನಾ ಸಮಿತಿಯು ಸಾಥ್ ನೀಡಿದೆ. ‘‘ನಾವು ಇಲ್ಲಿಗೆ ಬಂದಿದ್ದಕ್ಕೆ ಸಂತೋಷವಾಗುತ್ತಿದೆ. ಭುವನೇಶ್ವರ ಕ್ರೀಡೆ ಕುರಿತು ಉತ್ಸಾಹ ಹೊಂದಿರುವ ನಗರವಾಗಿದೆ. ಹಾಕಿ ವಿಶ್ವಕಪ್‌ನ್ನು ಆಯೋಜಿಸಿರುವ ಈ ಸ್ಟೇಡಿಯಂ ವಿಶ್ವಕಪ್‌ಗೆ ಬದಲಾಗಬೇಕಾದ ಅಗತ್ಯವಿದೆ. ಒಂದು ವೇಳೆ ಭುವನೇಶ್ವರ ನಗರ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡರೆ, ಅಂಡರ್-17 ಮಹಿಳಾ ವಿಶ್ವಕಪ್ ಭಾರೀ ಯಶಸ್ಸು ಸಾಧಿಸುವ ಸಂಪೂರ್ಣ ವಿಶ್ವಾಸ ನನಗಿದೆ’’ಎಂದು ಫಿಫಾ ಟೂರ್ನಿಯ ಪ್ರೊಜೆಕ್ಟ್ ಹೆಡ್ ಒಲಿವೆರ್ ವೊಗ್ಟೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News