ಐಟಿಟಿಎಫ್ ವರ್ಲ್ಡ್ ಕಪ್ : ಸತ್ಯನ್ ಸವಾಲು ಅಂತ್ಯ

Update: 2019-11-30 18:08 GMT

ಚೆಂಗ್ಡು(ಚೀನಾ), ನ.30:ಅಂತರ್‌ರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್(ಐಟಿಟಿಎಫ್)ಪುರುಷರ ವಿಶ್ವಕಪ್‌ನಲ್ಲಿ ಜಿ.ಸತ್ಯನ್ ಅವರ ಕನಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಟಿಮೊ ಬಾಲ್ ವಿರುದ್ಧ ಸೋಲುವುದರೊಂದಿಗೆ ಸತ್ಯನ್ ಸವಾಲು ಅಂತ್ಯವಾಗಿದೆ.

ಚೊಚ್ಚಲ ವಿಶ್ವಕಪ್ ಪಂದ್ಯವ ನ್ನಾಡಿದ ವಿಶ್ವದ ನಂ.30ನೇ ಆಟಗಾರ ಸತ್ಯನ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಟಿಮೊ ಬಾಲ್‌ಗೆ 1-4(11-7, 8-11, 5-11, 9-11, 8-11)ಅಂತರದಿಂದ ಸೋತಿದ್ದಾರೆ. ಸತ್ಯನ್ 1-0 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅನುಭವಿ ಆಟಗಾರ ಬಾಲ್ ತಕ್ಷಣವೇ ತಿರುಗೇಟು ನೀಡಿ ಪಂದ್ಯವನ್ನು ಸಮಬಲಕ್ಕೆ ತಂದರು. 2 ಬಾರಿಯ ವಿಶ್ವಕಪ್ ಚಾಂಪಿಯನ್ ಬಾಲ್ ಮುಂದಿನ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News