ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಚಾಂಪಿಯನ್ ಪಟ್ಟ ಉಳಿಸಿಕೊಂಡ ಕರ್ನಾಟಕ
Update: 2019-12-01 22:55 IST
ಸೂರತ್, ಡಿ.2: ತಮಿಳುನಾಡು ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ರವಿವಾರ ಹಾಲಿ ಚಾಂಪಿಯನ್ ಕರ್ನಾಟಕ 1 ರನ್ ಅಂತರದಲ್ಲಿ ರೋಚಕ ಜಯ ಗಳಿಸಿದ್ದು, ಚಾಂಪಿಯನ್ ಪಟ್ಟವನ್ನು ಮತ್ತೆ ಉಳಿಸಿಕೊಂಡಿದೆ.
ಗೆಲುವಿಗೆ 181 ರನ್‌ಗಳ ಸವಾಲನ್ನು ಪಡೆದ ತಮಿಳುನಾಡು ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತು.
ತಮಿಳುನಾಡು ತಂಡದ ಬಾಬಾ ಅಪರಾಜಿತ್ 40 ರನ್, ವಿಜಯ್ ಶಂಕರ್ 44ರನ್, ನಾಯಕ ದಿನೇಶ್ ಕಾರ್ತಿಕ್ 20 ರನ್, ವಾಷಿಂಗ್ಟನ್ ಸುಂದರ್ 24ರನ್, ಶಾರುಖ್ ಖಾನ್ 16ರನ್, ಹರಿ ನಿಶಾಂತ್ 14ರನ್ ಮತ್ತು ರವಿಚಂದ್ರನ್ ಅಶ್ವಿನ್ ಔಟಾಗದೆ 16 ರನ್ ಗಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 180 ರನ್ ಗಳಿಸಿತ್ತು.