ಮೊದಲ ಟ್ವೆಂಟಿ-20 : ಭಾರತಕ್ಕೆ ಭರ್ಜರಿ ಗೆಲುವು

Update: 2019-12-06 17:07 GMT

ಹೈದರಾಬಾದ್, ಡಿ.6: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಗಳಿಸಿದೆ. ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 208 ರನ್‌ಗಳ ಸವಾಲು ಪಡೆದ ಭಾರತ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿದೆ.

ನಾಯಕ ವಿರಾಟ್ ಕೊಹ್ಲಿ ಔಟಾಗದೆ 94 ರನ್(50ಎ, 6ಬೌ,6ಸಿ) , ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ 62 ರನ್(40ಎ, 5ಬೌ, 4ಸಿ) ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು.

ರೋಹಿತ್ ಶರ್ಮಾ 8ರನ್ (10ಎ, 1ಬೌ), ರಿಷಭ್ ಪಂತ್ 18ರನ್(9ಎ, 2ಸಿ), ಶ್ರೆಯಸ್ ಅಯ್ಯರ್ 4ರನ್(6ಎಸೆತ) ಗಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ ಶಿಮ್ರ್‌ನ್ ಹೆಟ್ಮೆಯರ್ ಅರ್ಧಶತಕದ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 207 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News