ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 4-1 ಜಯ

Update: 2019-12-07 17:42 GMT

ಮೆಲ್ಬೊರ್ನ್ , ಡಿ.7: ಭಾರತದ ಜೂನಿಯರ್ ಮಹಿಳೆಯರ ಹಾಕಿ ತಂಡ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ಮೂರು ರಾಷ್ಟ್ರಗಳ ಸರಣಿಯಲ್ಲಿ 4-1 ಅಂತರದಲ್ಲಿ ಜಯ ಗಳಿಸಿದೆ.

ಭಾರತದ ನಾಲ್ಕನೇ ನಿಮಿಷದಲ್ಲಿ ಭಾರತದ ಫಾರ್ವರ್ಡ್ ಬ್ಯೂಟಿ ಡಂಗ್ಡುಂಗ್ ಪೆನಾಲ್ಟಿ ಕಾರ್ನರ್ ಮೂಲಕ ತಂಡಕ್ಕೆ ಗೋಲು ಗಳಿಸಿ 1-0 ಮುನ್ನಡೆ ದೊರಕಿಸಿಕೊಟ್ಟರು. ನ್ಯೂಝಿಲ್ಯಾಂಡ್‌ನ ಒಲಿವಿಯಾ ಶಾನನ್ (4ನೇ ನಿಮಿಷ) ಗೋಲು ಗಳಿಸಿ 1-1 ಸಮಬಲ ಸಾಧಿಸಿದರು.

ಶರ್ಮಿಳಾ ದೇವಿ (12, 43ನೇ), ಬ್ಯೂಟಿ ಡಂಗ್ಡುಂಗ್ (27ನೇ ನಿಮಿಷ ) ಮತ್ತು ಲಾಲ್ರಿಂಡಿಕಿ (48ನೇ) ಅವರು ಗೋಲು ಜಮೆ ಮಾಡಿ ಭಾರತದ ಗೆಲುವಿಗೆ ನೆರವಾದರು

ಮೊದಲ ಕ್ವಾರ್ಟರ್‌ನಲ್ಲಿ ಭಾರತ ಬ್ಯೂಟಿ ಡಂಗ್ಡುಂಗ್ ಮತ್ತು ಶರ್ಮಿಳಾ ತಲಾ 1 ಗೋಲುಗಳ ನೆರವಿನಲ್ಲಿ 2-1 ಮುನ್ನಡೆ ಸಾಧಿಸಿತು.

ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಹಲವಾರು ಅವಕಾಶಗಳನ್ನು ಹೊಂದಿದ್ದವು, ಆದರೆ ಅಂತಿಮವಾಗಿ 27ನೇ ನಿಮಿಷದಲ್ಲಿ ಭಾರತವು ತನ್ನ ಪೆನಾಲ್ಟಿ ಕಾರ್ನರ್‌ಅವಕಾಶವನ್ನು ಗೋಲು ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಭಾರತದ ಫಾರ್ವರ್ಡ್ ಬ್ಯೂಟಿ ಡಂಗ್ಡುಂಗ್ ಎರಡನೇ ಗೋಲು ಗಳಿಸಿ ತನ್ನ ತಂಡಕ್ಕೆ ಹೆಚ್ಚು ಅರ್ಹವಾದ ಮುನ್ನಡೆ ಸಾಧಿಸಲು ಸಹಾಯ ಮಾಡಿದರು.

ದ್ವಿತೀಯಾರ್ಧಲ್ಲಿ ನ್ಯೂಝಿಲ್ಯಾಂಡ್ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಭಾರತದ ಬಿಚು ದೇವಿ ಖರಿಬಮ್ ಗೋಲು ಗಳಿಸಿಲು ಅವಕಾಶ ನೀಡಲಿಲ್ಲ. ಭಾರತವನ್ನು 2-1 ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.

ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಆರಂಭ ನಿಧಾನವಾಗಿತ್ತು. ಭಾರತದ ಗೋಲುಕೀಪರ್ ಬಿಚು ಅವರನ್ನು 40ನೇ ನಿಮಿಷದಲ್ಲಿ ಮತ್ತೆ ಡೈವಿಂಗ್ ಸೇವ್ ಮೂಲಕ ನ್ಯೂಝಿಲ್ಯಾಂಡ್‌ಗೆ ಗೋಲು ನಿರಾಕರಿಸಿದರು. 43ನೇ ನಿಮಿಷದಲ್ಲಿ ಶರ್ಮಿಳಾ ತನ್ನ ಎರಡನೇ ಫೀಲ್ಡ್ ಗೋಲನ್ನು ಗಳಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು.

ಮೂರನೇ ಗೋಲು ಗಳಿಸಿದ ನಂತರ ಭಾರತದ ತಂಡದೊಳಗೆ ವಿಶ್ವಾಸದ ಮಟ್ಟ ಏರಿತು ಮತ್ತು ಕೊನೆಯ ಕ್ವಾರ್ಟರ್‌ನಲ್ಲಿ ಅವರು ಆಕ್ರಮಣಕಾರಿಯಾಗಿಆಡಿತು.

48ನೇ ನಿಮಿಷದಲ್ಲಿ ಭಾರತವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಯುವ ಫಾರ್ವರ್ಡ್ ಲಾಲ್ರಿಂಡಿಕಿ ಅವರು ನ್ಯೂಝಿಲ್ಯಾಂಡ್‌ನ ಗೋಲುಕೀಪರ್ ಕೆಲ್ಲಿ ಕಾರ್ಲೈನ್ ಅವರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಭಾರತ 4-1 ಗೋಲುಗಳ ಮುನ್ನಡೆ ಪಡೆಯಿತು.

ಮುಂದೆ ನ್ಯೂಝಿಲ್ಯಾಂಡ್ ಗೋಲು ಗಳಿಸುವ ಯತ್ನ ನಡೆಸಿತು. ಆದರೆ ಭಾರತದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. 3 ರಾಷ್ಟ್ರಗಳ ಪಂದ್ಯಾವಳಿಯ ಮೂರು ಪಂದ್ಯಗಳಲ್ಲಿ ಭಾರತ ಇದೀಗ ಎರಡನೇ ಜಯ ದಾಖಲಿಸಿದೆ. ರವಿವಾರ ನಡೆಯಲಿರುವ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News