ವಿಂಡೀಸ್ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್: 241 ರನ್‌ ಗುರಿ ನೀಡಿದ ಕೊಹ್ಲಿ ಪಡೆ

Update: 2019-12-11 16:01 GMT

ಮುಂಬೈ, ಡಿ.11: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತವು ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಕೇವಲ 3 ವಿಕೆಟ್‌ ನಷ್ಟಕ್ಕೆ 240 ರನ್‌ ಕಲೆ ಹಾಕಿತು.

ಇನಿಂಗ್ಸ್‌ ಆರಂಭಿಸಿ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 11.4 ಓವರ್‌ಗಳಲ್ಲಿ 135 ರನ್‌ ಗಳಿಸಿದರು. ರೋಹಿತ್‌ ಶರ್ಮಾ 71 ರನ್ ಗಳಿಸಿ ಔಟಾದರು. ಬಳಿಕ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್‌ ಪಂತ್‌ ಖಾತೆ ತೆರೆಯದೆ ನಿರ್ಗಮಿಸಿದರು. ಬಳಿಕ ಬಂದ ವಿರಾಟ್‌ ಕೊಹ್ಲಿ ಕೇವಲ 29 ಎಸೆತಗಳಲ್ಲಿ ಏಳು ಸಿಕ್ಸರ್‌ ಹಾಗೂ 4 ಬೌಂಡರಿ ಮೂಲಕ 70 ರನ್‌ ಗಳಿಸಿದರು. ಕನ್ನಡಿಗ ರಾಹುಲ್‌ 56 ಎಸೆತಗಳಲ್ಲಿ 91 ರನ್‌ ಗಳಿಸಿ ಔಟಾದರು.

ವೆಸ್ಟ್‌ ಇಂಡೀಸ್‌ ಪರ ಶೇಲ್ಡನ್‌ ಕಾಟ್ರೆಲ್‌ 40ಕ್ಕೆ 1 , ಕೆಸ್ರಿಕ್ ವಿಲಿಯಮ್ಸ್ 37ಕ್ಕೆ 1, ಕೀರನ್ ಪೊಲಾರ್ಡ್ 33ಕ್ಕೆ 1 ವಿಕೆಟ್‌ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News