ಹೇಝಲ್‌ವುಡ್ ಬಾಕ್ಸಿಂಗ್ ಡೇ ಟೆಸ್ಟ್ ಗೆ ಅಲಭ್ಯ

Update: 2019-12-14 17:34 GMT

ಮೆಲ್ಬೋರ್ನ್, ಡಿ.14: ಪರ್ತ್‌ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಝಲ್‌ವುಡ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ. ಶುಕ್ರವಾರ ಟೆಸ್ಟ್‌ನ ಎರಡನೇ ದಿನ ತನ್ನ 2ನೇ ಓವರ್‌ನ 4ನೇ ಎಸೆತವನ್ನು ಎಸೆಯುವ ವೇಳೆ ಅವರಿಗೆ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆ ಕಾಣಿಸಿಕೊಂಡಿತ್ತು. ಓವರ್‌ನ್ನು ಪೂರ್ಣಗೊಳಿಸದೆ ಕ್ರೀಡಾಂಗಣವನ್ನು ತೊರೆದಿದ್ದರು. ಆದರೆ ಅವರು 1 ವಿಕೆಟ್ ಪಡೆದಿದ್ದರು.

ಪಂದ್ಯದ ಮೂರನೇ ದಿನ ಅವರು ಆಡಲಿಲ್ಲ. ಕಿವೀಸ್ ವಿರುದ್ಧದ ಉಳಿದ ಮೂರು ಟೆಸ್ಟ್ ಸರಣಿಯಿಂದಲೂ ಅವರು ಹೊರಗುಳಿಯುತ್ತಾರೋ ಎನ್ನುವುದು ಸ್ಪಷ್ಟಗೊಂಡಿಲ್ಲ. ಆದಾಗ್ಯೂ, ಎರಡನೇ ಟೆಸ್ಟ್( ಬಾಕ್ಸಿಂಗ್ ಡೇ ಟೆಸ್ಟ್ )ನಿಂದ ಹೊರಗುಳಿಯುವುದು ಖಚಿತವಾಗಿದೆ.

ನ್ಯೂಝಿಲ್ಯಾಂಡ್‌ನ ಪರಿಸ್ಥಿತಿಯು ಆಸ್ಟ್ರೇಲಿಯಾಕ್ಕಿಂತ ಭಿನ್ನವಾಗಿಲ್ಲ. ಲಾಕಿ ಫರ್ಗುಸನ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಮೊದಲ ದಿನವೇ ಅವರು ಗಾಯದ ಸಮಸ್ಯೆ ಎದುರಿಸಿದ್ದರು. ಉಳಿದ ಟೆಸ್ಟ್ ಪಂದ್ಯಗಳಿಗೆ ಅವರನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಂದು ತಂಡದ ಮೂಲಗಳು ತಿಳಿಸಿವೆ. ಉಳಿದ ಪಂದ್ಯಗಳಿಗೆ ನ್ಯೂಝಿಲ್ಯಾಂಡ್ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ರನ್ನು ಸೇರಿಸಿಕೊಳ್ಳಲಿದೆ. ಆದರೆ ಆಸ್ಟ್ರೇಲಿಯಾವು ನಾಥನ್ ಲಿಯಾನ್ ಅವರನ್ನು ಹೆಚ್ಚು ಅವಲಂಬಿಸುವಂತಾಗಿದೆ.

ಶುಕ್ರವಾರ ಮಿಚೆಲ್ ಸ್ಟಾರ್ಕ್ ಪ್ರಹಾರಕ್ಕೆ ಸಿಲುಕಿದ ನ್ಯೂಝಿ ಲ್ಯಾಂಡ್ 55.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News