ಜಾಮಿಯಾ ವಿದ್ಯಾರ್ಥಿಗಳ ಬಗ್ಗೆ ದೇಶ ಹಾಗೂ ನನಗೆ ಕಳಕಳಿ ಇದೆ: ಇರ್ಫಾನ್ ಪಠಾಣ್

Update: 2019-12-16 13:06 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಬಗ್ಗೆ ತನಗೆ ಕಳಕಳಿ ಇದೆ ಎಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಹೊಸ ಪೌರತ್ವ ಕಾಯ್ದೆ ವಿರುದ್ಧ ರವಿವಾರ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿತ್ತು.

"ರಾಜಕೀಯ ಕೆಸರೆರಚಾಟ ಸದಾ ನಡೆಯುತ್ತದೆ. ಆದರೆ ನಾನು ಹಾಗೂ ನಮ್ಮ ದೇಶ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೊಂದಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಾಮಿಯಾ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಹಿಂಸೆ ನಿಲ್ಲಿಸಲು ಪೊಲೀಸರು ಅಶ್ರುವಾಯು ಮತ್ತು ಬ್ಯಾಟನ್ ಪ್ರಯೋಗಿಸಿದ್ದರು. ಬಳಿಕ ವಿವಿ ಕ್ಯಾಂಪಸ್‍ ಗೆ ದಾಳಿ ಮಾಡಿ 100 ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಬೆಳಗ್ಗೆ 3.30ರ ವೇಳೆಗೆ ಎಲ್ಲರನ್ನೂ ಬಿಡುಗಡೆಗೊಳಿಸಲಾಗಿತ್ತು.

ಪೊಲೀಸರ ಈ ಕ್ರಮ ಅಲೀಗಢ ಮುಸ್ಲಿಂ ವಿವಿಯಲ್ಲೂ ಪ್ರತಿಭಟನೆಗೆ ಕಾರಣವಾಗಿತ್ತು. ಇಲ್ಲೂ ಪೊಲೀಸರ ಜತೆ ನಡೆದ ಸಂಘರ್ಷದಲ್ಲಿ 30 ವಿದ್ಯಾರ್ಥಿಗಳು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News