×
Ad

ನಾನೇನೂ ತಪ್ಪು ಮಾಡಿಲ್ಲ: ಟ್ರಂಪ್

Update: 2019-12-18 22:26 IST

ವಾಶಿಂಗ್ಟನ್, ಡಿ. 18: ‘‘ನಾನು ಏನೂ ತಪ್ಪು ಮಾಡಿಲ್ಲ’’ ಎಂದು ಅಮೆರಿಕ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ತನ್ನ ವಿರುದ್ಧದ ವಾಗ್ದಂಡನೆಗೆ ಮತದಾನ ಆರಂಭಗೊಳ್ಳುವ ಮುನ್ನ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಹೇಳಿದ್ದಾರೆ.

‘‘ಕಡು ವಾಮಪಂಥೀಯರು ಮತ್ತು ‘ಏನೂ ಮಾಡದ ಡೆಮಾಕ್ರಟ್’ಗಳಿಂದ ನಾನು ವಾಗ್ದಂಡನೆಗೆ ಒಳಗಾಗುತ್ತಿದ್ದೇನೆ ಎನ್ನುವುದನ್ನು ನೀವು ನಂಬಲು ಸಾಧ್ಯವೇ? ನಾನು ಏನೂ ತಪ್ಪು ಮಾಡಿಲ್ಲ! ಭಯಾನಕ ಸಂಗತಿ’’ ಎಂದು ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

‘‘ಹೀಗೆ ಇನ್ನೋರ್ವ ಅಧ್ಯಕ್ಷರಿಗೆ ಯಾವತ್ತೂ ಆಗಬಾರದು. ಪ್ರಾರ್ಥನೆ ಮಾಡಿ’’ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News