ಶೀಘ್ರವೇ ಕ್ರಿಕೆಟ್ ಸಲಹಾ ಸಮಿತಿ ರಚನೆ: ಸೌರವ್ ಗಂಗುಲಿ

Update: 2019-12-20 18:51 GMT

ಕೋಲ್ಕತಾ, ಡಿ.20:ಮೂರು ವರ್ಷಗಳ ಅವಧಿಗೆ ನೂತನ ಆಯ್ಕೆ ಸಮಿತಿಯ ನೇಮಕ ಮಾಡಲು ಮುಂದಿನ ಕೆಲವೇ ದಿನಗಳಲ್ಲಿ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯನ್ನು ರಚಿಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಘೋಷಿಸಿದ್ದಾರೆ. ಮಾಜಿ ನಾಯಕ ಕಪಿಲ್‌ದೇವ್ ನೇತೃತ್ವದ ಹಿಂದಿನ ಸಮಿತಿ ಈಗಾಗಲೇ ಸೀನಿಯರ್ ತಂಡಕ್ಕೆ ಮುಖ್ಯ ಕೋಚ್ ಆಯ್ಕೆ ಮಾಡಿರುವ ಕಾರಣ ಸಿಎಸಿ ಸೇವೆಯ ಅಗತ್ಯ ಎದುರಾಗಿದೆ.

‘‘ಇನ್ನೆರಡು ದಿನಗಳಲ್ಲಿ ಸಿಎಸಿ ನೇಮಕ ಮಾಡಲಾಗುವುದು. ಮುಖ್ಯ ಕೋಚ್‌ರನ್ನು ಈಗಾಗಲೇ ನೇಮಕ ಮಾಡಿರುವ ಕಾರಣ ಆಯ್ಕೆಗಾರರನ್ನು ಆಯ್ಕೆ ಮಾಡಲು ಇನ್ನು ಒಂದೇ ಸಭೆಯನ್ನು ನಡೆಸಲಿದೆ’’ ಎಂದು ಗಂಗುಲಿ ತಿಳಿಸಿದರು.

ಹಾಲಿ ಆಯ್ಕೆ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಜೊತೆಗೆ ಇನ್ನೋರ್ವ ಸದಸ್ಯ ಗಗನ್ ಖೋಡ ಅವರ ಅಧಿಕಾರದ ಅವಧಿಯು ಮುಗಿದಿದೆ. ಜತಿನ್ ಪರಾಂಜಪೆ, ಸರನ್‌ದೀಪ್ ಸಿಂಗ್ ಹಾಗೂ ದೇವಾಂಗ್ ಗಾಂಧಿ ಅವರ ಒಂದು ವರ್ಷದ ಅಧಿಕಾರದ ಅವಧಿ ಬಾಕಿ ಉಳಿದಿದೆ. ಆದರೆ, ಈ ಮೂವರು ತಮ್ಮ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News