ಮೀರಾಬಾಯಿ ಚಾನುಗೆ ಚಿನ್ನ
Update: 2019-12-21 00:22 IST
ದೋಹಾ, ಡಿ.20: ಮಾಜಿ ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಶುಕ್ರವಾರ ನಡೆದ ಆರನೇ ಆವೃತ್ತಿಯ ಖತರ್ ಅಂತರ್‌ರಾಷ್ಟ್ರೀಯ ಕಪ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದರು. ಈ ಮೂಲಕ ಭಾರತ ಟೂರ್ನಿಯಲ್ಲಿ ಪದಕದ ಖಾತೆ ತೆರೆದಿದೆ. ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಚಾನು 194 ಕೆಜಿ ಭಾರ ಎತ್ತುವುದರೊಂದಿಗೆ ಚಿನ್ನ ಜಯಿಸಿದರು. ಈ ಟೂರ್ನಿಯಲ್ಲಿ ಗಳಿಸುವ ಅಂಕ ಟೋಕಿಯೊ-2020ರ ಫೈನಲ್ ರ್ಯಾಂಕಿಂಗ್‌ನಲ್ಲಿ ಪರಿಗಣನೆಗೆ ಬರಲಿದೆ. ಚಾನು ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(201 ಕೆಜಿ)ಮೀರಿ ನಿಲ್ಲಲು ವಿಫಲರಾದರು. 2018ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಚಾನು ಸ್ನಾಚ್ ಹಾಗೂ ಕ್ಲೀನ್, ಜರ್ಕ್ ವಿಭಾಗಗಳಲ್ಲಿ ಕ್ರಮವಾಗಿ 83 ಕೆಜಿ ಹಾಗೂ 111ಕೆಜಿ ತೂಕ ಎತ್ತಿ ಹಿಡಿದು ಮೊದಲ ಸ್ಥಾನ ಪಡೆದರು.