ಬಿಬಿಎಲ್‌ನಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಮ್ಯಾಕ್ಸ್ ವೆಲ್
Update: 2019-12-21 00:24 IST
ವೆಲ್ ಮೆಲ್ಬೋರ್ನ್, ಡಿ.20: ಕೋಲ್ಕತಾದಲ್ಲಿ ಗುರುವಾರ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 10.75 ಕೋ.ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಶುಕ್ರವಾರ ನಡೆದ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ಟ್ವೆಂಟಿ-20 ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರವಾಗಿ 39 ಎಸೆತಗಳಲ್ಲಿ 83 ರನ್ ಗಳಿಸಿ ಅಬ್ಬರಿಸಿದರು.
ಖಿನ್ನತೆ ಸಮಸ್ಯೆಯಿಂದಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಕ್ರಿಕೆಟ್‌ಗೆ ವಾಪಸಾಗಿರುವ ಮ್ಯಾಕ್ಸ್ ವೆಲ್ ಬ್ರಿಸ್ಬೇನ್ ಹೀಟ್ಸ್ ತಂಡದ ವಿರುದ್ಧ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಸಿಡಿಸಿ ಮಿಂಚಿದರು. ಈ ಮೂಲಕ ತನ್ನದೇ ವೇಗದ ಅರ್ಧಶತಕ(23 ಎಸೆತ)ದಾಖಲೆಯನ್ನು ಸರಿಗಟ್ಟಿದರು.