ಸ್ವತಂತ್ರ ಮತ್ತು ಮುಕ್ತ ಹಾಂಕಾಂಗ್ ಮುಂದುವರಿಯಲಿ: ಜಪಾನ್

Update: 2019-12-24 16:30 GMT
file photo

ಬೀಜಿಂಗ್, ಡಿ. 24: ಹಾಂಕಾಂಗ್ ಸ್ವತಂತ್ರ ಮತ್ತು ಮುಕ್ತವಾಗಿ ಮುಂದುವರಿಯಬೇಕು ಎಂದು ಜಪಾನ್ ಪ್ರಧಾನಿ ಶಿಂರೊ ಅಬೆ ಸೋಮವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಹೇಳಿದ್ದಾರೆ.

ಅಬೆ ಸೋಮವಾರ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿಯಾದರು. ಮಂಗಳವಾರ ಚೆಂಗ್ಡು ನಗರದಲ್ಲಿ ನಡೆಯಲಿರುವ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಜಪಾನ್ ಪ್ರಧಾನಿ ಚೀನಾದಲ್ಲಿದ್ದಾರೆ. ತ್ರಿಪಕ್ಷೀಯ ಸಭೆಯಲ್ಲಿ ಚೀನಾ ಅಧ್ಯಕ್ಷ ಮತ್ತು ಜಪಾನ್ ಪ್ರಧಾನಿ ಜೊತೆಗೆ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಭಾಗವಹಿಸಲಿದ್ದಾರೆ.

ಹಾಂಕಾಂಗ್ ವಿಷಯದಲ್ಲಿ ಪ್ರದರ್ಶಿಸುತ್ತಿರುವ ಸ್ವಯಂನಿಯಂತ್ರಣವನ್ನು ಚೀನಾ ಮುಂದುವರಿಸಬೇಕು ಎಂಬುದಾಗಿ ಅಬೆ ಚೀನಾ ಅಧ್ಯಕ್ಷರನ್ನು ಒತ್ತಾಯಿಸಿದರು ಹಾಗೂ ಈ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಏರ್ಪಡುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು ಎಂದು ಕ್ಸಿ-ಅಬೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಪಾನ್ ವಿದೇಶ ವ್ಯವಹಾರಗಳ ಸಚಿವರ ವಕ್ತಾರ ಒಟಾಕ ಮಸಾಟೊ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News