2019ರಲ್ಲಿ ಚೀನಾದಲ್ಲಿ ಮುಸ್ಲಿಮರು, ಟಿಬೆಟನ್ನರು ಹೆಚ್ಚು ಬಡವರು: ಚೀನಾ ಸರಕಾರದ ವರದಿ
Update: 2019-12-24 22:01 IST
ಬೀಜಿಂಗ್, ಡಿ. 24: 2019ರಲ್ಲಿ ಚೀನಾದಲ್ಲಿ ಸುಮಾರು ಒಂದು ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆಯಾದರೂ, ಕ್ಸಿನ್‌ಜಿಯಾಂಗ್‌ನ ಕೆಲವು ಪ್ರದೇಶಗಳಲ್ಲಿ ಮತ್ತು ಟಿಬೆಟ್‌ನ ಅತ್ಯಂತ ಒಳ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಾಂಗೀಯ ಅಲ್ಪಸಂಖ್ಯಾತರು 2019ರಲ್ಲಿ ಕಡು ಬಡವರಾಗಿಯೇ ಮುಂದುವರಿದಿದ್ದಾರೆ ಎಂದು ಚೀನಾ ಸರಕಾರದ ವರ್ಷಾಂತ್ಯದ ವರದಿಯೊಂದು ತಿಳಿಸಿದೆ.
2018ರ ಕೊನೆಯಲ್ಲಿ, ಚೀನಾದಲ್ಲಿ ದೇಶಾದ್ಯಂತ ವರ್ಷಕ್ಕೆ 2,300 ಯುವಾನ್ (ಸುಮಾರು 23,000 ರೂಪಾಯಿ)ಗಿಂತಲೂ ಕಡಿಮೆ ವರಮಾನದಲ್ಲಿ ಜೀವಿಸುವ 1.66 ಕೋಟಿ ಬಡವರಿದ್ದರು. ದೇಶದ ಸುಮಾರು 400 ಕೌಂಟಿಗಳನ್ನು ಬಡತನಪೀಡಿತ ಎಂಬುದಾಗಿ ಗುರುತಿಸಲಾಗಿತ್ತು.
ಈ ವರ್ಷ ಈ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ಚೀನಾದ ಬಡತನ ನಿವಾರಣೆ ಅಧಿಕಾರಿ ಲಿಯು ಯೊಂಗ್ಫು ಹೇಳಿದ್ದಾರೆ.