ಸೇನಾ ನೆಲೆಯ ಮೇಲೆ ತಾಲಿಬಾನ್ ದಾಳಿ; 7 ಅಫ್ಘಾನ್ ಸೈನಿಕರ ಮೃತ್ಯು

Update: 2019-12-24 16:37 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಡಿ. 24: ಉತ್ತರ ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತದಲ್ಲಿ ಮಂಗಳವಾರ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಝ್ಬೆಕಿಸ್ತಾನದ ಗಡಿ ಸಮೀಪದ ದೌಲತ್ ಅಬಾದ್ ಜಿಲ್ಲೆಯಲ್ಲಿರುವ ಸೇನಾ ನೆಲೆಯೊಂದರ ಮೇಲೆ ‘ಭಯೋತ್ಪಾದಕರು’ ದಾಳಿ ನಡೆಸಿದರು ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಸೇನಾ ನೆಲೆಯಲ್ಲಿ ಸೇನೆ ಮತ್ತು ಅಪ್ಘಾನಿಸ್ತಾನದ ಗುಪ್ತಚರ ಸಂಸ್ಥೆ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಸಿಬ್ಬಂದಿ ಇದ್ದರು.

ಅದೇ ವೇಳೆ, ಓರ್ವ ಕಮಾಂಡರ್ ಸೇರಿದಂತೆ 20 ಸೈನಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ವಕ್ತಾರನೊಬ್ಬ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News