​ಈಜಿಪ್ಟ್‌ನಲ್ಲಿ ಬಸ್ ಅಪಘಾತ: ಭಾರತೀಯ ಪ್ರವಾಸಿ ಸೇರಿ ಆರು ಮಂದಿ ಮೃತ್ಯು

Update: 2019-12-29 04:53 GMT

ಕೈರೊ: ಈಜಿಪ್ಟ್‌ನಲ್ಲಿ ಸಂಭವಿಸಿದ ಬಸ್ ಅಪಘಾತವೊಂದರಲ್ಲಿ ಭಾರತ ಹಾಗೂ ಮಲೇಷ್ಯಾದ ಪ್ರವಾಸಿಗರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಟ 24 ಮಂದಿ ಗಾಯಗೊಂಡಿದ್ದಾರೆ.

ಪ್ರವಾಸಿಗರನ್ನು ಕೆಂಪುಸಮುದ್ರದ ಎಯ್ನ ಸೊಖಾನಾ ರೆಸಾರ್ಟ್‌ಗೆ ಕರೆದೊಯ್ಯುತ್ತಿದ್ದ ಬಸ್ಸು ಪೂರ್ವ ಕೈರೋದಲ್ಲಿ ಟ್ರಕ್‌ಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮಲೇಷ್ಯಾದ ಇಬ್ಬರು ಮಹಿಳಾ ಪ್ರವಾಸಿಗರು, ಭಾರತದ ಒಬ್ಬ ಪ್ರವಾಸಿ, ಬಸ್ ಚಾಲಕ, ಪ್ರವಾಸಿ ಗೈಡ್ ಹಾಗೂ ಭದ್ರತಾ ಪಡೆಯ ಸಿಬ್ಬಂದಿಯೊಬ್ಬ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ತೀರಾ ಕೆಟ್ಟ ರಸ್ತೆಗಳು ಮತ್ತು ಸಂಚಾರ ಕಾನೂನುಗಳ ಜಾರಿಯಲ್ಲಿನ ಲೋಪದಿಂದಾಗಿ ಈಜಿಪ್ಟ್‌ನಲ್ಲಿ ಅಪಘಾತಗಳು ಮಾಮೂಲಿ. ಆದರೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವ ಕಾರಣದಿಂದ ರಸ್ತೆ ಅಪಘಾತಗಳು ಕಡಿಮೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ 7480 ಅಪಘಾತಗಳು ಸಂಭವಿಸಿದ್ದು, ಹಿಂದಿನ ವರ್ಷ 11098 ಅಪಘಾತಗಳು ವರದಿಯಾಗಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News