×
Ad

ತಾಂಝಾನಿಯ: ಜಗತ್ತಿನ ಅತಿ ಹಿರಿಯ ಖಡ್ಗಮೃಗ ಸಾವು

Update: 2019-12-30 23:51 IST
file photo

ಡರ್ ಎಸ್ ಸಲಾಮ್ (ತಾಂಝಾನಿಯ), ಡಿ. 30: ತಾಂಝಾನಿಯದ ಅಭಯಾರಣ್ಯದಲ್ಲಿದ್ದ, ಜಗತ್ತಿನ ಅತ್ಯಂತ ಹಿರಿಯ ಎನ್ನಲಾದ 57 ವರ್ಷದ ಹೆಣ್ಣು ಖಡ್ಗಮೃಗ ‘ಫಾಸ್ತಾ’ ಮೃತಪಟ್ಟಿದೆ.

ನಗೊರೊಂಗೊರೊ ಕ್ರೇಟರ್‌ನಲ್ಲಿ ಬಂಧನದಲ್ಲಿದ್ದ ಕಪ್ಪು ಖಡ್ಗಮೃಗ ಶುಕ್ರವಾರ ವೃದ್ಧಾಪ್ಯದಿಂದಾಗಿ ಮೃತಪಟ್ಟಿದೆ ಎಂದು ಸರಕಾರಿ ಅಭಯಾರಣ್ಯ ಇಲಾಖೆ ಘೋಷಿಸಿದೆ.

‘‘ಜಗತ್ತಿನಲ್ಲಿ ಬೇರೆ ಯಾವುದೇ ಖಡ್ಗಮೃಗಗಳಿಗಿಂತ ಹೆಚ್ಚು ಕಾ ಫಾಸ್ತಾ ಜೀವಿಸಿದೆ ಎನ್ನುವುದನ್ನು ದಾಖಲೆಗಳು ತೋರಿಸುತ್ತವೆ. ಅದು ನಗೊರೊಂಗೊ ಅಭಯಾರಣ್ಯದಲ್ಲಿ ಮುಕ್ತವಾಗಿ 54 ವರ್ಷಗಳ ಕಾಲ ಜೀವಿಸಿದೆ ಹಾಗೂ ಕಳೆದ ಮೂರು ವರ್ಷಗಳಿಂದ ಅದನ್ನು ನಿರ್ಬಂಧದಲ್ಲಿ ಇಡಲಾಗಿತ್ತು’’ ಎಂದು ನಗೊರೊಂಗೊ ಅಭಯಾರಣ್ಯ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News