×
Ad

ಎರಡನೇ ಟೆಸ್ಟ್: ಎಲ್ಗರ್ ಅರ್ಧಶತಕ, ದ.ಆಫ್ರಿಕಾ 215/8

Update: 2020-01-05 10:31 IST

ಕೇಪ್‌ಟೌನ್, ಜ.4: ಡೀನ್ ಎಲ್ಗರ್ ಹಾಗೂ ವ್ಯಾನ್‌ಡರ್ ಡಸ್ಸೆನ್ ನಾಲ್ಕನೇ ವಿಕೆಟ್‌ಗೆ ಸೇರಿಸಿದ ಶತಕದ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ತಿರುಗೇಟು ನೀಡಲು ಯತ್ನಿಸುತ್ತಿದೆ. ಆದಾಗ್ಯೂ ಆತಿಥೇಯರನ್ನು 2ನೇ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 215 ರನ್‌ಗೆ ನಿಯಂತ್ರಿಸಿರುವ ಆಂಗ್ಲರು ಮೇಲುಗೈ ಸಾಧಿಸಿದ್ದಾರೆ. 9 ವಿಕೆಟ್‌ಗಳ ನಷ್ಟಕ್ಕೆ 262 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡವನ್ನು 269 ರನ್‌ಗೆ ನಿಯಂತ್ರಿಸಿದ ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 54 ರನ್ ಹಿನ್ನಡೆಯಲ್ಲಿದೆ. ಕಾಗಿಸೊ ರಬಾಡ(3-68)ಯಶಸ್ವಿ ಬೌಲರ್ ಎನಿಸಿಕೊಂಡರು. ಒಲ್ಲಿ ಪೋಪ್ ಔಟಾಗದೆ 61 ರನ್ ಗಳಿಸಿದರು. ವೆರ್ನಾನ್ ಫಿಲ್ಯಾಂಡರ್(ಔಟಾಗದೆ 13)

 ಹಾಗೂ ಕಾಗಿಸೊ ರಬಾಡ(0)ರವಿವಾರ ಮೂರನೇ ದಿನದಾಟವನ್ನು ಮುಂದುವರಿಸಲಿದ್ದಾರೆ. 40 ರನ್‌ಗೆ 3 ವಿಕೆಟ್ ಕಬಳಿಸಿದ ಇಂಗ್ಲೆಂಡ್ ತಂಡ ಆಫ್ರಿಕಾ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿತ್ತು. ಆಗ ಎಲ್ಗರ್ ಹಾಗೂ ಡಸ್ಸೆನ್ 4ನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಎಲ್ಗರ್ 180 ಎಸೆತಗಳಲ್ಲಿ 14ನೇ ಅರ್ಧಶತಕ(88)ಗಳಿಸಿದರು. ಡಸ್ಸೆನ್ 187 ಎಸೆತಗಳಲ್ಲಿ 68 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News