ಅಂಪೈರ್‌ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಚೌಧರಿ

Update: 2020-01-08 17:53 GMT

ದುಬೈ, ಜ.8: ಜನವರಿ 17ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಲಿರುವ 16 ಅಂಪೈರ್‌ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಚೌಧರಿ ಸ್ಥಾನ ಪಡೆದಿದ್ದಾರೆ. ಚೌಧರಿ, ಅಂಪೈರ್‌ಗಳ ಪಟ್ಟಿಯಲ್ಲಿರುವ ಭಾರತದ ಏಕೈಕ ಅಧಿಕಾರಿಯಾಗಿದ್ದಾರೆ. 54ರ ಹರೆಯದ ಚೌಧರಿ ಈಗ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಸಹಿತ 20 ಏಕದಿನ ಹಾಗೂ 27 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ದಿಲ್ಲಿ ಮೂಲದ ಚೌಧರಿ ಈ ಹಿಂದೆ ಹಲವು ಬಾರಿ ಅಂಡರ್-19 ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದರು. ಎಲ್ಲ 16 ಅಂಪೈರ್‌ಗಳು 12 ವಿವಿಧ ದೇಶಕ್ಕೆ ಸೇರಿದವರಾಗಿದ್ದಾರೆ. ಇವರು ಅಂಡರ್-19 ವಿಶ್ವಕಪ್‌ನ ಮೊದಲ ಹಂತದಲ್ಲಿ ತಲಾ ಐದು ಪಂದ್ಯಗಳಲ್ಲಿ, 8 ಮಂದಿ ಟಿವಿ ಅಂಪೈರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಟೂರ್ನಮೆಂಟ್‌ಗೆ ಮೂವರು ಮ್ಯಾಚ್ ರೆಫರಿಗಳನ್ನು ಐಸಿಸಿ ನೇಮಿಸಿದೆ. ನಾಕೌಟ್ ಹಂತದ ಅಂಪೈರ್ ಹಾಗೂ ಮ್ಯಾಚ್ ರೆಫರಿಗಳನ್ನು ಬಳಿಕ ಆಯ್ಕೆ ಮಾಡಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News