ಕೆಕೆಆರ್‌ನ ಕ್ರಿಸ್ ಗ್ರೀನ್ ಅಮಾನತು

Update: 2020-01-08 18:06 GMT

ಮೆಲ್ಬೋರ್ನ್, ಜ.8: ಆಸ್ಟ್ರೇಲಿಯದ ಸ್ಪಿನ್ನರ್ ಕ್ರಿಸ್ ಗ್ರೀನ್ ನಿಯಮಬಾಹಿರ ಬೌಲಿಂಗ್ ಕಾರಣದಿಂದಾಗಿ ಅಮಾನತುಗೊಂಡಿದ್ದಾರೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ (ಬಿಬಿಎಲ್) ಗ್ರೀನ್ ಸಂಶಯಾಸ್ಪದ ಬೌಲಿಂಗ್ ಬಗ್ಗೆ ಅಂಪೈರ್ ವರದಿ ನೀಡಿದ್ದರು. 90 ದಿನಗಳ ಕಾಲ ಗ್ರೀನ್ ಬೌಲಿಂಗ್ ನಡೆಸುವಂತಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ. ಗ್ರೀನ್ ಇತ್ತೀಚೆಗೆ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌(ಕೆಕೆಆರ್) ತಂಡ ಸೇರ್ಪಡೆಗೊಂಡಿದ್ದರು. ಸಿಡ್ನಿ ಶೋ ಗ್ರೌಂಡ್‌ನಲ್ಲಿ ಜ.2ರಂದು ನಡೆದ ಸಿಡ್ನಿ ಥಂಡರ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಗ್ರೀನ್ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಫೀಲ್ಡ್ ಅಂಪೈರ್‌ಗಳು ವರದಿ ನೀಡಿದ್ದರು. ಜನವರಿ 5ರಂದು ನ್ಯಾಶನಲ್ ಕ್ರಿಕೆಟ್ ಸೆಂಟರ್‌ನಲ್ಲಿ ಅವರ ಬೌಲಿಂಗ್ ಶೈಲಿಯ ಬಗ್ಗೆ ಪರೀಕ್ಷೆ ನಡೆಸಲಾಗಿತ್ತು. ಆಗ ಅವರ ಬೌಲಿಂಗ್ ಶೈಲಿ ನಿಯಮಬಾಹಿರವಾಗಿರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News