ಸೆರೆನಾ ವಿಲಿಯಮ್ಸ್ , ಕರೊಲಿನ್ ಕ್ವಾರ್ಟರ್ ಫೆನಲ್‌ಗೆ

Update: 2020-01-09 17:07 GMT

ಆಕ್ಲೆಂಡ್, ಜ.9: ಅಗ್ರ ಶ್ರೇಯಾಂಕದ ಸೆರೆನಾ ವಿಲಿಯಮ್ಸ್ ಹಾಗೂ ಕರೊಲಿನ್ ವೋಝ್ನಿಯಾಕಿ ಆಕ್ಲ್ಲೆಂಡ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಪ್ರಯಾಸಕರ ಜಯ ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು. ಭರವಸೆಯ ಯುವ ಆಟಗಾರ್ತಿ ಕೊಕೊ ಗೌಫ್ ಸೋಲನುಭವಿಸಿದರು. ಸೆರೆನಾ ವಿಲಿಯಮ್ಸ್ ಎರಡು ಗಂಟೆಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಅಮೆರಿಕದ ಸಹ ಆಟಗಾರ್ತಿ ಕ್ರಿಸ್ಟಿನಾ ಮೆಕ್ಹೇಲ್ ಅವರನ್ನು 3-6, 6-2, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಮತ್ತೊಂದು ಮಹಿಳೆಯರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೋಝ್ನಿಯಾಕಿ ಅವರು ಯುವ ಆಟಗಾರ್ತಿ ಲಾರೆನ್ ಡಾವಿಸ್ ವಿರುದ್ಧ 6-1, 4-6, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಗೌಫ್ ಎರಡು ಗಂಟೆ, 14 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜರ್ಮನಿಯ ಲೌರಾ ಸಿಗ್ಮಂಡ್ ವಿರುದ್ಧ 7-5, 2-6, 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಸಿಗ್ಮಂಡ್ ಮುಂದಿನ ಸುತ್ತಿನಲ್ಲಿ ವಿಲಿಯಮ್ಸ್‌ರನ್ನು ಎದುರಿಸಲಿದ್ದಾರೆ. ವಿಲಿಯಮ್ಸ್ 86ನೇ ರ್ಯಾಂಕಿನ ಮೆಕ್ಹೇಲ್ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ಮೆಕ್ಹೇಲ್ ಕಳೆದ 3 ಪಂದ್ಯಗಳಲ್ಲಿ 23 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ವಿಲಿಯಮ್ಸ್‌ರನ್ನು ಸೋಲಿಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News