ಜ.24ರಿಂದ ಭಾರತೀಯ ಮಹಿಳಾ ಫುಟ್ಬಾಲ್ ಲೀಗ್ ಆರಂಭ

Update: 2020-01-09 17:17 GMT

ಹೊಸದಿಲ್ಲಿ, ಜ.9: ಹೀರೊ ಮಹಿಳಾ ಫುಟ್ಬಾಲ್ ಲೀಗ್ 2019-20ರ ಅಂತಿಮ ಸುತ್ತಿನ ಪಂದ್ಯ ಬೆಂಗಳೂರಿನಲ್ಲಿ ಜ.24ರಂದು ಆರಂಭವಾಗಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್)ಗುರುವಾರ ತಿಳಿಸಿದೆ.

 ನಾಲ್ಕನೇ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ದೇಶದೆಲ್ಲೆಡೆಯ 12 ತಂಡಗಳು ಭಾಗವಹಿಸಲಿವೆ. ಭಾರತೀಯ ಮಹಿಳಾ ಕ್ಲಬ್ ಫುಟ್ಬಾಲ್‌ನ ಉನ್ನತ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಪ್ಯಾನ್ ಇಂಡಿಯ ಮಾದರಿಯಲ್ಲಿ ವಲಯ ಅರ್ಹತಾ ಪಂದ್ಯಗಳು ನಡೆದ ಬಳಿಕ ತಂಡಗಳು ಅಂತಿಮ ಸುತ್ತಿನಲ್ಲಿ ಆಡಲು ಬೆಂಗಳೂರಿನಲ್ಲಿ ಸೇರಲಿವೆ. ಮಣಿಪುರ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಒಡಿಶಾ, ಪಶ್ಚಿಮಬಂಗಾಳ, ಪಂಜಾಬ್, ಕರ್ನಾಟಕ ಹಾಗೂ ರೆಸ್ಟ್ ಆಫ್ ಇಂಡಿಯಾ ವಲಯಗಳು ಫೈನಲ್ ಸುತ್ತಿಗೆ ಟಿಕೆಟ್ ಪಡೆದಿವೆ. 12 ತಂಡಗಳನ್ನು ಆರು ತಂಡಗಳಿರುವ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಗ್ರೂಪ್ ಹಂತದಲ್ಲಿ ಪ್ರತಿ ತಂಡಗಳು ಒಂದು ಬಾರಿ ಆಡಲಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್‌ಗೆ ಪ್ರವೇಶಿಸಲಿವೆ. ಮಣಿಪುರ ತಂಡ ಕರ್ನಾಟಕ ಎಫ್‌ಸಿ ತಂಡವನ್ನು ಎದುರಿಸುವುದರೊಂದಿಗೆ ಟೂರ್ನಮೆಂಟ್ ಆರಂಭವಾಗಲಿದೆ. ಟೂರ್ನಿಯ ಫೈನಲ್ ಪಂದ್ಯ ಫೆ.13ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News