×
Ad

ಮೂರನೇ ಟ್ವೆಂಟಿ-20: ಶ್ರೀಲಂಕಾ ಗೆಲ್ಲಲು 202 ರನ್ ಗುರಿ

Update: 2020-01-10 20:52 IST

ಪುಣೆ, ಜ.10: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್(54) ಹಾಗೂ ಶಿಖರ್ ಧವನ್(52) ಅರ್ಧಶತಕಗಳ ಕೊಡುಗೆ ನೆರವಿನಿಂದ ಆತಿಥೇಯ ಭಾರತ ತಂಡ ಶ್ರೀಲಂಕಾ ತಂಡಕ್ಕೆ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ ಕಠಿಣ ಸವಾಲು ನೀಡಿದೆ.

 ಟಾಸ್ ಗೆದ್ದ ಶ್ರೀಲಂಕಾ ತಂಡ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಉತ್ತಮ ಆರಂಭ ಪಡೆದ ಭಾರತ ಮಧ್ಯಮ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು.

ರಾಹುಲ್(54,36 ಎಸೆತ, 5 ಬೌಂಡರಿ, 1ಸಿಕ್ಸರ್)ಹಾಗೂ ಧವನ್(52, 36 ಎಸೆತ, 7 ಬೌಂಡರಿ,1 ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್(6), ಶ್ರೇಯಸ್ ಅಯ್ಯರ್(4), ನಾಯಕ ವಿರಾಟ್‌ಕೊಹ್ಲಿ(26) ಹಾಗೂ ವಾಷಿಂಗ್ಟನ್ ಸುಂದರ್(0)ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಮನೀಷ್ ಪಾಂಡೆ(ಔಟಾಗದೆ 31, 18 ಎಸೆತ, 4 ಬೌಂಡರಿ)ಹಾಗೂ ಶಾರ್ದೂಲ್ ಠಾಕೂರ್(ಔಟಾಗದೆ 22, 8 ಎಸೆತ, 1 ಬೌಂಡರಿ,2 ಸಿಕ್ಸರ್)7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಸೇರಿಸಿ ತಂಡದ ಮೊತ್ತವನ್ನು 201ಕ್ಕೆ ತಲುಪಿಸಿದರು.

ಶ್ರೀಲಂಕಾದ ಪರ ಸಂಡಕನ್(3-35) ಯಶಸ್ವಿ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News