ದುಬೈ: ಭಾರತೀಯ ವಿದ್ಯಾರ್ಥಿನಿಯ ವೀಸಾ ಹಿಂದಿರುಗಿಸಿ ಆಪತ್ಬಾಂಧವನಾದ ಪಾಕ್ ಟ್ಯಾಕ್ಸಿ ಚಾಲಕ

Update: 2020-01-13 15:11 GMT

ದುಬೈ, ಜ. 13: ದುಬೈಯಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬರ ಕಳೆದುಹೋದ ಕೈಚೀಲವನ್ನು ಹಿಂದಿರುಗಿಸುವ ಮೂಲಕ ಪಾಕಿಸ್ತಾನಿ ಟ್ಯಾಕ್ಸಿ ಚಾಲಕರೊಬ್ಬರು ಆ ವಿದ್ಯಾರ್ಥಿನಿಯ ಪಾಲಿನ ಆಪದ್ಬಾಂಧವನಾಗಿ ಮೂಡಿಬಂದಿದ್ದಾರೆ.

ಕಳೆದು ಹೋದ ಕೈಚೀಲದಲ್ಲಿ ವಿದ್ಯಾರ್ಥಿನಿಯ ಬ್ರಿಟನ್ ವಿದ್ಯಾರ್ಥಿ ವೀಸಾ, ಎಮಿರೇಟ್ಸ್ ಗುರುತುಚೀಟಿ, ಯುಎಇ ಚಾಲನಾ ಪರವಾನಿಗೆ, ಆರೋಗ್ಯ ವಿಮೆ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು 1,000 ದಿರ್ಹಮ್‌ಗೂ ಅಧಿಕ ನಗದು ಇದ್ದವು.

ಚಳಿಗಾಲದ ರಜೆಯಲ್ಲಿ ದುಬೈಗೆ ಬಂದಿದ್ದ ವಿದ್ಯಾರ್ಥಿನಿ ರ್ಯಾಶಲ್ ರೋಸ್ ಜನವರಿ 4ರಂದು ತನ್ನ ಕೈಚೀಲವನ್ನು ಮುದಸ್ಸರ್ ಖಾದಿಮ್‌ರ ಟ್ಯಾಕ್ಸಿಯಲ್ಲಿ ಮರೆತುಹೋಗಿದ್ದರು. ರೋಸ್ ಹೆತ್ತವರು ದುಬೈಯಲ್ಲಿ ವಾಸವಾಗಿದ್ದಾರೆ.

ರ್ಯಾಶಲ್ ಜನವರಿ 8 ರಂದು ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹಿಂದಿರುಗಬೇಕಾಗಿತ್ತು. ವೀಸಾ ಕಳೆದುಕೊಂಡ ಚಿಂತೆಯಲ್ಲಿ ವಿದ್ಯಾರ್ಥಿನಿ ಇದ್ದಾಗ, ಟ್ಯಾಕ್ಸಿ ಚಾಲಕನು ಆರ್‌ಟಿಒ ನೆರವಿನಿಂದ ವಿದ್ಯಾರ್ಥಿನಿಯ ವಿಳಾಸ ಪತ್ತೆ ಹಚ್ಚಿ ಕೈಚೀಲವನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News