2ನೇ ಮಹಾಯುದ್ಧ ಕಾಲದ 2 ಬಾಂಬ್‌ಗಳ ನಿಷ್ಕ್ರಿಯ: 14,000 ಜನರ ಸ್ಥಳಾಂತರ

Update: 2020-01-13 15:34 GMT

ಬರ್ಲಿನ್ (ಜರ್ಮನಿ), ಜ. 13: ಪಶ್ಚಿಮ ಜರ್ಮನಿಯ ನಗರ ಡಾರ್ಟ್‌ಮಂಡ್‌ನಲ್ಲಿ ಶನಿವಾರ ಎರಡನೇ ಮಹಾಯುದ್ಧದ ಕಾಲದ ಎರಡು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಅದಕ್ಕೂ ಮುನ್ನ ಸುಮಾರು 14,000 ಜನರನ್ನು ಸ್ಥಳಾಂತರಿಸಲಾಯಿತು.

ನಗರದ ಕೇಂದ್ರ ಭಾಗದಲ್ಲಿರುವ ಅತ್ಯಂತ ಜನಭರಿತ ನಾಲ್ಕು ಸ್ಥಳಗಳಲ್ಲಿ ಎರಡನೇ ಮಹಾಯುದ್ಧದ ಅವಧಿಯಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ಹಾಕಿದ ಬಾಂಬ್‌ಗಳು ಸ್ಫೋಟಗೊಳ್ಳದೆ ಹುದುಗಿಹೋಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಇದಕ್ಕೂ ಮೊದಲು ಎಚ್ಚರಿಕೆ ನೀಡಿದ್ದರು.

ಕಟ್ಟಡ ನಿರ್ಮಾಣದ ವೇಳೆ ವಿಚಿತ್ರ ವಸ್ತುಗಳನ್ನು ಕಾರ್ಮಿಕರು ಪತ್ತೆಹಚ್ಚಿದ ಬಳಿಕ ಅಧಿಕಾರಿಗಳು ಈ ಎಚ್ಚರಿಕೆ ನೀಡಿದರು. ತಲಾ 250 ಕಿಲೋಗ್ರಾಂ ತೂಗುವ ಎರಡು ಬಾಂಬ್‌ಗಳನ್ನು ಬಳಿಕ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಯಿತು. ಒಂದು ಬಾಂಬ್ ಬ್ರಿಟಿಶರದ್ದಾಗಿದ್ದರೆ, ಇನ್ನೊಂದು ಅಮೆರಿಕದ್ದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News