ಅಮೆರಿಕ ಜೊತೆಗಿನ ಉದ್ವಿಗ್ನತೆ ಶಮನಕ್ಕೆ ಇರಾನ್ ಒಲವು

Update: 2020-01-13 15:36 GMT

ಟೆಹರಾನ್, ಜ. 13: ಅಮೆರಿಕ ಜೊತೆಗಿನ 10 ದಿನಗಳ ಸಂಘರ್ಷದ ಬಳಿಕ, ಉದ್ವಿಗ್ನತೆ ಶಮನಕ್ಕೆ ಇರಾನ್ ರವಿವಾರ ಮುಂದಾಗಿದೆ. ಈ ಅವಧಿಯಲ್ಲಿ ಉಭಯ ಬಣಗಳು ಪರಸ್ಪರರತ್ತ ಹಲವು ಸುತ್ತುಗಳ ಕ್ಷಿಪಣಿ ದಾಳಿಗಳನ್ನು ನಡೆಸಿವೆ ಹಾಗೂ ಯುಕ್ರೇನ್‌ನ ನಾಗರಿಕ ವಿಮಾನವೊಂದನ್ನು ತಪ್ಪಾಗಿ ಹೊಡೆದುರುಳಿಸಲಾಗಿದೆ.

 ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಆ ದೇಶದೊಂದಿಗೆ ಯಾವುದೇ ಪೂರ್ವಶರತ್ತು ಇಲ್ಲದೆ ಮಾತುಕತೆ ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಲೂ ಒಲವು ಹೊಂದಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹೇಳಿದ್ದಾರೆ. ಆದರೆ, ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವ ಮೊದಲು ಅಮೆರಿಕದೊಂದಿಗೆ ಮಾತುಕತೆ ನಡೆಸುವುದನ್ನು ಇರಾನ್ ತಳ್ಳಿ ಹಾಕಿತ್ತು.

 ಆದರೆ, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮತ್ತು ಟೆಹರಾನ್‌ಗೆ ಭೇಟಿ ನೀಡಿರುವ ಖತರ್ ಅಮೀರ್ ನಡುವೆ ಮಾತುಕತೆ ನಡೆದ ಬಳಿಕ, ಪ್ರಾದೇಶಿಕ ಬಿಕ್ಕಟ್ಟು ಪರಿಹಾರಕ್ಕೆ ಉದ್ವಿಗ್ನತೆ ಶಮನವೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಉಭಯ ದೇಶಗಳು ಬಂದವು ಖತರ್ ಅಮೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News