×
Ad

ಆಸ್ಟ್ರೇಲಿಯ ವಿರುದ್ಧ ಗೆಲುವಿನ ನಗೆ ಬೀರಿದ ಕೊಹ್ಲಿ ಪಡೆ: ಸರಣಿ ಸಮಬಲ

Update: 2020-01-17 22:04 IST

ರಾಜ್‌ಕೋಟ್, ಜ.17: ಶಿಖರ್ ಧವನ್ ನೇತೃತ್ವದ ಬ್ಯಾಟಿಂಗ್ ಹಾಗೂ ಮುಹಮ್ಮದ್ ಶಮಿ ಸಾರಥ್ಯದ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ 2ನೇ ಏಕದಿನ ಪಂದ್ಯವನ್ನು 36 ರನ್‌ನಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಗೆಲ್ಲಲು 341 ರನ್ ಕಠಿಣ ಗುರಿ ಪಡೆದಿರುವ ಆಸ್ಟ್ರೇಲಿಯ 49.1 ಓವರ್‌ಗಳಲ್ಲಿ  304 ರನ್ ಗಳಿಸಿ ಆಲೌಟಾಯಿತು

. ರಿಚರ್ಡ್ಸ್‌ಸನ್ ಔಟಾಗದೆ 24 ರನ್ ಗಳಿಸಿದರು. ಭಾರತದ ಪರ ಶಮಿ(3-77)ಯಶಸ್ವಿ ಬೌಲರ್ ಎನಿಸಿಕೊಂಡರೆ, ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ(2-58) ಹಾಗೂ ಕುಲದೀಪ್ ಯಾದವ್(2-65), ಮಧ್ಯಮ ವೇಗಿ ಸೈನಿ(2-62)ತಲಾ ಎರಡು ವಿಕೆಟ್ ಪಡೆದರು.

ಮಾಜಿ ನಾಯಕ ಸ್ಟೀವ್ ಸ್ಮಿತ್(98, 102 ಎಸೆತ, 9 ಬೌಂಡರಿ,1 ಸಿಕ್ಸರ್)38ನೇ ಓವರ್‌ನಲ್ಲಿ ಕುಲದೀಪ್ ಯಾದವ್‌ಗೆ ಕ್ಲೀನ್‌ಬೌಲ್ಡಾದಾಗ ಪಂದ್ಯ ಭಾರತದ ಪರ ವಾಲಿತು. ನಾಯಕ ಫಿಂಚ್‌ರೊಂದಿಗೆ 2ನೇ ವಿಕೆಟ್‌ಗೆ 62 ರನ್ ಸೇರಿಸಿದ ಸ್ಮಿತ್ ಆ ನಂತರ ಲ್ಯಾಬುಶೆನ್(46, 47 ಎಸೆತ)ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News