ಆಯ್ಕೆ ಸಮಿತಿಯ ಎರಡು ಹುದ್ದೆಗಳಿಗೆ ಬಿಸಿಸಿಐ ಅರ್ಜಿ ಆಹ್ವಾನ

Update: 2020-01-18 17:15 GMT

ಹೊಸದಿಲ್ಲಿ, ಜ.18: ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಹಾಗೂ ಆಯ್ಕೆಗಾರ ಗಗನ್ ಖೋಡಾ ಅವರಿಂದ ತೆರವಾದ ಸ್ಥಾನವನ್ನು ಭರ್ತಿ ಮಡಲು ಬಿಸಿಸಿಐ ಶನಿವಾರ ಅರ್ಜಿಗಳನ್ನು ಆಹ್ವಾನಿಸಿದೆ.

ಹಿರಿಯರ ಆಯ್ಕೆ ಸಮಿತಿಯ ಜೊತೆಗೆ ಮಹಿಳಾ ಆಯ್ಕೆ ಸಮಿತಿ, ಜೂನಿಯರ್ ಆಯ್ಕೆ ಸಮಿತಿಯಲ್ಲಿ ಎರಡು ಬದಲಾವಣೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಜನವರಿ 24 ಕೊನೆಯ ದಿನವಾಗಿದೆ.

ಮದನ್‌ಲಾಲ್, ಗೌತಮ್ ಗಂಭೀರ್ ಹಾಗೂ ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಪ್ರಸ್ತಾವಿತ ಕ್ರಿಕೆಟ್ ಆಯ್ಕೆ ಸಮಿತಿಯು ಆಸಕ್ತ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆಯೇ ಎಂದು ಸ್ಪಷ್ಟವಾಗಿಲ್ಲ.

60ಕ್ಕಿಂತ ಹೆಚ್ಚು ವಯಸ್ಸಿನವರು ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಭಾರತದ ಮಾಜಿ ನಾಯಕ ದಿಲಿಪ್ ವೆಂಗ್‌ಸರ್ಕಾರ್ ಹೆಸರು ಚಾಲ್ತಿಯಲ್ಲಿದೆ. ಅವರಿಗೆ ಈಗ 64 ವರ್ಷ ವಯಸ್ಸಾಗಿದೆ.

ಸೌರವ್ ಗಂಗುಲಿ ನೇತೃತ್ವದ ಬಿಸಿಸಿಐ ಹೊಸ ಸಂವಿಧಾನಕ್ಕೆ ಬದ್ಧವಾಗಿದ್ದು, ಇದರಲ್ಲಿ ಸೀನಿಯರ್ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 7 ಟೆಸ್ಟ್ ಅಥವಾ 30 ಪ್ರಥಮ ದರ್ಜೆ ಪಂದ್ಯಗಳು, 10 ಏಕದಿನ ಅಥವಾ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಕನಿಷ್ಠ ಐದು ವರ್ಷಗಳ ಹಿಂದೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News