ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧ 7 ವಿಕೆಟ್‌ಗಳ ಜಯ: ಸರಣಿ ಕೈವಶ

Update: 2020-01-19 15:46 GMT

ಬೆಂಗಳೂರು, ಜ.19: ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 287 ರನ್‌ಗಳ ಸವಾಲನ್ನು ಪಡೆದ ಭಾರತ ತಂಡ ಉಪನಾಯಕ ರೋಹಿತ್ ಶರ್ಮಾ ಶತಕ (119) ಮತ್ತು ನಾಯಕ ವಿರಾಟ್ ಕೊಹ್ಲಿ ದಾಖಲಿಸಿದ 89 ರನ್‌ಗಳ ನೆರವಿನಲ್ಲಿ 47.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 289 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಶ್ರೇಯಸ್ ಅಯ್ಯರ್ ಔಟಾಗದೆ 44 ರನ್(35ಎ. 6ಬೌ,1ಸಿ) ಮತ್ತು ಮನೀಷ್ ಪಾಂಡೆ ಔಟಾಗದೆ 8 ರನ್(4ಎ,2ಬೌ) ಗಳಿಸಿ ತಂಡದ ಗೆಲುವಿನ ವಿಧಿವಿಧಾನ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News