ರಣಜಿ: ರೈಲ್ವೇಸ್ ವಿರುದ್ಧ ತಮಿಳುನಾಡಿಗೆ ಭರ್ಜರಿ ಜಯ

Update: 2020-01-20 17:49 GMT

ಚೆನ್ನೈ, ಜ.20: ತಮಿಳುನಾಡು ತಂಡ ಸೋಮವಾರ ನಡೆದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಎರಡನೇ ದಿನ ರೈಲ್ವೇಸ್ ವಿರುದ್ಧ ಇನಿಂಗ್ಸ್ ಹಾಗೂ 164 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ ಈ ಋತುವಿನ ರಣಜಿಯಲ್ಲಿ ಮೊದಲ ಬಾರಿ ಗೆಲುವಿನ ನಗೆ ಬೀರಿತು.

ರೈಲ್ವೇಸ್‌ನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 66 ರನ್‌ಗೆ ನಿಯಂತ್ರಿಸಿದ ತಮಿಳುನಾಡು ತನ್ನ ಮೊದಲ ಇನಿಂಗ್ಸ್‌ನಲ್ಲಿ 330 ರನ್ ಗಳಿಸಿ ಆಲೌಟಾಯಿತು. ಎರಡನೇ ಇನಿಂಗ್ಸ್‌ನಲ್ಲೂ ಪ್ರಾಬಲ್ಯ ಮೆರೆದ ತಮಿಳುನಾಡು ತಂಡ ರೈಲ್ವೇಸ್‌ನ್ನು 36.4 ಓವರ್‌ಗಳಲ್ಲಿ ಕೇವಲ 90 ರನ್‌ಗೆ ಆಲೌಟ್ ಮಾಡಿತು. ಈ ಮೂಲಕ ಏಳಂಕವನ್ನು ಬಾಚಿಕೊಂಡಿತು. ಎಡಗೈ ಸ್ಪಿನ್ನರ್ ಆರ್.ಸಾಯಿ ಕಿಶೋರ್ ಕೇವಲ 16 ರನ್ ನೀಡಿ ರೈಲ್ವೇಸ್‌ನ ಐದು ವಿಕೆಟ್‌ಗಳನ್ನು ಉರುಳಿಸಿದರು. ಆರ್.ಅಶ್ವಿನ್(3-36)ಕಿಶೋರ್‌ಗೆ ಸಾಥ್ ನೀಡಿದರು. 4 ವಿಕೆಟ್‌ಗಳ ನಷ್ಟಕ್ಕೆ 236 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ತ.ನಾಡು ದಿನೇಶ್ ಕಾರ್ತಿಕ್(57) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಬಾಬಾ ಇಂದ್ರಜಿತ್(58,118ಎಸೆತ, 8 ಬೌಂಡರಿ)ತಂಡಕ್ಕೆ ಆಸರೆಯಾಗಿ 330 ರನ್ ಗಳಿಸಲು ನೆರವಾದರು. ಮೊದಲ ಇನಿಂಗ್ಸ್ ನಲ್ಲಿ 154 ರನ್ ಮುನ್ನಡೆ ಪಡೆಯಲೂ ಕಾರಣರಾದರು. ಯುವ ಎಡಗೈ ಸ್ಪಿನ್ನರ್ ಹರೀಶ್ ತ್ಯಾಗಿ 58 ರನ್‌ಗೆ 5 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News