ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಮನಮೋಹನ್ ಸೂದ್ ನಿಧನ

Update: 2020-01-20 17:57 GMT

ಹೊಸದಿಲ್ಲಿ, ಜ.20: ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಹಾಗೂ ರಾಷ್ಟ್ರೀಯ ಆಯ್ಕೆಗಾರ ಮನಮೋಹನ್ ಸೂದ್ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

 ಸೂದ್ 1957ರಲ್ಲಿ ದಿಲ್ಲಿಯ ಫಿರೋಝ್‌ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಸರ್ವಿಸಸ್ ವಿರುದ್ಧ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಆಡಿದ್ದರು. 1964ರಲ್ಲಿ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರದ ವಿರುದ್ಧ ಕೊನೆಯ ರಣಜಿ ಟ್ರೋಫಿ ಪಂದ್ಯ ಆಡಿದ್ದರು. 1960ರಲ್ಲಿ ಮದ್ರಾಸ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಈ ಪಂದ್ಯವನ್ನು ಭಾರತ ಇನಿಂಗ್ಸ್ ಹಾಗೂ 55 ರನ್‌ಗಳಿಂದ ಸೋತಿತ್ತು. ಎರಡೂ ಇನಿಂಗ್ಸ್‌ನಲ್ಲಿ ಸೂಡ್ ಕ್ರಮವಾಗಿ 0 ಹಾಗೂ 3 ರನ್‌ಗೆ ಎಡಗೈ ವೇಗದ ಬೌಲರ್ ಅಲನ್ ಡೇವಿಡ್‌ಸನ್‌ಗೆ ವಿಕೆಟ್ ಒಪ್ಪಿಸಿದ್ದರು.

 ಸೂದ್ ಡಿಡಿಸಿಎಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸೂದ್ ಒಂದು ಟೆಸ್ಟ್ ಹಾಗೂ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News