ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳಿಗೆ ಬೆಳ್ಳಿ

Update: 2020-01-21 17:57 GMT

ಕಪ್ ಟೂರ್ನಿ ಸೊಂಬೊರ್,ಜ.21: ಸೆರ್ಬಿಯಾದ ಸೊಂಬೋರ್‌ನಲ್ಲಿ ನಡೆದ 9ನೇ ನೇಶನ್ಸ್ ಕಪ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಬೆಳ್ಳಿ ಪಡೆದಿದ್ದಾರೆ.

ರವಿವಾರ ರಾತ್ರಿ ನಡೆದ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳಾದ ಮೀನಾ ಕುಮಾರಿ (54 ಕೆ.ಜಿ.), ಮೋನಿಕಾ (48 ಕೆ.ಜಿ.), ರಿತು ಗ್ರೆವಾಲ್ (51 ಕೆ.ಜಿ.) ಮತ್ತು ಭಾಗ್ಯವತಿ ಕಚಾರಿ (75 ಕೆ.ಜಿ.) ಬೆಳ್ಳಿ ಪದಕ ಗೆದ್ದರು. ಪವಿತ್ರಾ (60 ಕೆ.ಜಿ.) ಮತ್ತು ಪಿವಿಲಾವ್ ಬಸುಮಾಟರಿ (64 ಕೆ.ಜಿ.) ಸೆಮಿಪೈನಲ್‌ನಲ್ಲಿ ಸೋತು ಕಂಚು ಪಡೆದರು.

ಕಳೆದ ವರ್ಷ ಕಲೋನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೀನಾ ಅವರು ಕಠಿಣ ಹೋರಾಟದ ಸ್ಪರ್ಧೆಯಲ್ಲಿ ಇಟಲಿಯ ಜಿಯೋರ್ಡಾನಾ ಸೊರೆಂಟಿನೊ ವಿರುದ್ಧ 1-4ರಿಂದ ಸೋಲು ಅನುಭವಿಸಿದರು.

ಹಾಲಿ ರಾಷ್ಟ್ರೀಯ ಚಾಂಪಿಯನ್ ಕಚಾರಿ ಮೊರಾಕ್ಕೊದ ಖದೀಜಾ ಮರ್ಡಿ ವಿರುದ್ಧ 1-4 ಅಂತರದಿಂದ ಸೋತರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾದ ಸಾರಾ ಕೋಸ್ ವಿರುದ್ಧದ ಮೂರನೇ ಸುತ್ತಿನಲ್ಲಿ ಬಸುಮಾಟರಿಯನ್ನು ಅನರ್ಹಗೊಳಿಸಲಾಯಿತು.

ಪವಿತ್ರಾ ಇಟಲಿಯ ರೆಬೆಕಾ ನಿಕೋಲಿ ವಿರುದ್ಧ ತೀವ್ರವಾಗಿ ಹೋರಾಡಿದರೂ 2-3 ಅಂತರದಲ್ಲಿ ಸೋಲು ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News