ಥಾಯ್ಲೆಂಡ್ ಮಾಸ್ಟರ್ಸ್: ಶ್ರೀಕಾಂತ್, ಸಮೀರ್ ವರ್ಮಾ ಹೊರಕ್ಕೆ

Update: 2020-01-22 08:18 GMT

ಬ್ಯಾಂಕಾಕ್ , ಜ.22: ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಬುಧವಾರ ಭಾರತದ ಕೆ.ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಸೋತು ನಿರ್ಗಮಿಸಿದ್ದಾರೆ.

ಕೆ. ಶ್ರೀಕಾಂತ್  ಅವರು ಇಂಡೋನೇಶ್ಯದ ಶೆಸರ್ ಹಿರೆನ್ ರುಸ್ತಾವಿಟೊ  ವಿರುದ್ಧ ಮತ್ತು ಸಮೀರ್ ವರ್ಮಾ  ಅವರು ಮಲೇಶ್ಯದ ಲೀ ಝಿ ಜಿಯಾ ವಿರುದ್ಧ ಸೋತು ನಿರ್ಗಮಿಸಿದ್ದಾರೆ.

 ಮೊದಲ ಸುತ್ತಿನಲ್ಲಿ ರುಸ್ತಾವಿಟೊ ವಿರುದ್ಧ ಶ್ರೀಕಾಂತ್ 48 ನಿಮಿಷಗಳ ಹಣಾಹಣಿಯಲ್ಲಿ  21-12, 14-21, 11-21 ಅಂತರದಿಂದ ಸೋತರು. ಇದು ಶ್ರೀಕಾಂತ್‌ರ ವರ್ಷದ ಮೂರನೇ ಹಾಗೂ ಮೊದಲ ಸುತ್ತಿನಲ್ಲಿ ನೇರ  ಸೋಲು ಆಗಿದೆ .  ರುಸ್ತಾವಿಟೊ ಅವರ ಎದುರು ಸತತ ಎರಡನೇ ಬಾರಿ ಶ್ರೀಕಾಂತ್ ಸೋಲು ಅನುಭವಿಸಿದ್ದಾರೆ.

ಸಮೀರ್ ವರ್ಮಾ  38 ನಿಮಿಷಗಳಲ್ಲಿ ಲೀ ಝಿ ಜಿಯಾಗೆ  16-21, 15-21 ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News