ನಿವೃತ್ತಿ ಬಗ್ಗೆ ಯೋಚಿಸಿಲ್ಲ: ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ

Update: 2020-01-23 17:30 GMT

ಪುಣೆ, ಜ.23: ಫುಟ್ಬಾಲ್‌ನಲ್ಲಿ ಯಾವಾಗ ನಿವೃತ್ತಿಯಾಗಬೇಕೆಂದು ತಾನು ಯೋಚಿಸಲ್ಲ ಎಂದು ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಗುರುವಾರ ಸ್ಪಷ್ಟಪಡಿಸಿದ್ದಾರೆ.

 35ರ ಹರೆಯದ ಛೆಟ್ರಿ ರಾಷ್ಟ್ರೀಯ ತಂಡದೊಂದಿಗೆ ಆಡಲು ಹೆಚ್ಚು ಆಟಗಳು ಇನ್ನೂ ಉಳಿದಿಲ್ಲ ಎಂದು ಹೇಳಿದ್ದರು.

‘‘ನಾನು ನನ್ನ ವೃತ್ತಿಜೀವನದ ಇನ್ನೊಂದು ಬದಿಯಲ್ಲಿದ್ದೇನೆ. ಈಗಾಗಲೇ ದೇಶದ ಪರ 112 ಪಂದ್ಯಗಳನ್ನು ಆಡಿದ್ದೇನೆ ಮುಂದೆ ನಾನು 250 ಪಂದ್ಯಗಳನ್ನು ಆಡಲು ಹೋಗುವುದಿಲ್ಲ. ಆದರೆ ನಾನು ಯಾವಾಗ ಆಟ ನಿಲ್ಲಿಸುತ್ತೇನೆ ಎಂದು ನನಗೆ ಗೊತ್ತಿಲ್ಲ. ಆದರೆ ನಾನು ಈ ಆಟವನ್ನು ಪ್ರೀತಿಸುತ್ತೇನೆ’’ ಎಂದು ಹೇಳಿದರು.

ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಸಕ್ರಿಯ ಆಟಗಾರರಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಗೋಲು ಗಳಿಸಿದ ಎರಡನೇ ಆಟಗಾರ ಆಗಿರುವ ಛೆಟ್ರಿ ಅವರು ಱಱನನಗೆ ನಿಜವಾಗಿಯೂ ಆಡಲು ಶಕ್ತಿ ಇದೆ ಎಂದು ಭಾವಿಸುತ್ತೇನೆ. ಹಾಗಾಗಿ ನಾನು ಸಾಧ್ಯವಾದಷ್ಟು ಮುಂದುವರಿಯುತ್ತೇನೆ. ಆದರೆ ಸತ್ಯವೆಂದರೆ, ನಾನು ನನ್ನ ವೃತ್ತಿಜೀವನದ ಇನ್ನೊಂದು ಬದಿಯಲ್ಲಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News