ಆರ್ಚರಿ : ಭಾರತದ ಅಮಾನತು ವಾಪಸ್

Update: 2020-01-23 17:56 GMT

ಕೋಲ್ಕತಾ, ಜ.23: ವಿಶ್ವ ಆರ್ಚರಿ ಸಂಸ್ಥೆಯು ಭಾರತಕ್ಕೆ ವಿಧಿಸಿದ್ದ ಅಮಾನತನ್ನು ಕೆಲವು ಷರತ್ತ್ತುಗಳೊಂದಿಗೆ ಹಿಂಪಡೆದಿದೆ. ಇದು ಭಾರತದ ಬಿಲ್ಲುಗಾರರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಉತ್ತೇಜನ ನೀಡಿದಂತಾಗಿದೆ.

  ಆಡಳಿತ ಸಮಸ್ಯೆಗಳನ್ನು ಪರಿಹರಿಸಿ ಮತ್ತು ಕಾರ್ಯತಂತ್ರದ ಯೋಜನೆಯನ್ನು ಅಭಿವೃದ್ಧಿಪಡಿಸುವಂತೆ ವಿಶ್ವ ಆರ್ಚರಿ ಸಂಸ್ಥೆಯು ಎಎಐಗೆ ಸಲಹೆ ನೀಡಿದೆ. ಈ ವಿಷಯಗಳ ಬಗ್ಗೆ ತ್ರೈಮಾಸಿಕ ಪ್ರಗತಿ ವರದಿಯನ್ನು ನೀಡಲು ಸೂಚಿಸಿದೆ.

   ಜನವರಿ 18 ರಂದು ಹೊಸದಿಲ್ಲಿಯಲ್ಲಿ ನಡೆದ ಚುನಾವಣೆಯ ನಂತರ ಅಸೋಸಿಯೇಷನ್ ಆಫ್ ಇಂಡಿಯಾ ಭಾರತದ ಅಮಾನತನ್ನು ಹಿಂಪಡೆದಿತ್ತು. ಇದೀಗ ಕಾರ್ಯನಿರ್ವಾಹಕ ಮಂಡಳಿಯ ಅಂಚೆ ಮತದಾನದ ಮೂಲಕ ಅಮಾನತನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

 ಇನ್ನು ಮುಂದೆ ಭಾರತದ ಬಿಲ್ಲುಗಾರರಿಗೆ ವಿಶ್ವ ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಕ್ರೀಡಾಪಟುಗಳ ಸದಸ್ಯತ್ವವನ್ನು ಸ್ಪಷ್ಟಪಡಿಸಲು, ಕಾರ್ಯತಂತ್ರದ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಇತರ ಆಡಳಿತ ಸಮಸ್ಯೆಯನ್ನು ಪರಿಹರಿಸಲು ಮತ್ತು ಅದರ ಸಂವಿಧಾನವನ್ನು ನವೀಕರಿಸಲು ಸೂಚಿಸಲಾಗಿದೆ.

   ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ವರದಿಯ ನೀಡುವಂತೆ ಸಲಹೆ ನೀಡಿದೆ. ಭಾರತವನ್ನು ಆಗಸ್ಟ್ 5ರಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಭಾರತೀಯ ಕ್ರೀಡಾಪಟುಗಳಿಗೆ ತಟಸ್ಥ ಧ್ವಜದಡಿಯಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ ನೀಡಲಾಯಿತು. ಆದರೆ ಗುರುವಾರ ನಿಷೇಧವನ್ನು ತೆಗೆದುಹಾಕಿದ ನಂತರ, ಭಾರತೀಯ ಬಿಲ್ಲುಗಾರರು ಈಗ ಭಾರತೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಮುಕ್ತರಾಗಿದ್ದಾರೆ. ಭಾರತ ಪ್ರಸ್ತುತ 2020 ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೂರು ಪುರುಷರ ಮತ್ತು ಒಂದು ಮಹಿಳಾ ಕೋಟಾ ಸ್ಥಾನವನ್ನು ಪಡೆದಿದೆ. ಭಾರತೀಯ ಕ್ರೀಡಾಪಟುಗಳು ಈಗ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿಗೆ ಗಮನಹರಿಸಬಹುದಾಗಿದೆ. ದಿಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ನಡೆದ ಚುನಾವಣೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಶನಿವಾರ ಇಲ್ಲಿ ಎಎಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

  ನ್ಯಾಯಾಲಯ ವಿಶ್ವ ಆರ್ಚರಿ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು ಚುನಾವಣೆಗೆ ತಮ್ಮ ವೀಕ್ಷಕರನ್ನು ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News