ರೈಲ್ವೇಸ್ ಬ್ಯಾಟಿಂಗ್‌ ಗೆ ಮಂದ ಬೆಳಕು ಅಡ್ಡಿ

Update: 2020-01-27 17:23 GMT

ಹೊಸದಿಲ್ಲಿ, ಜ.27: ಕರ್ನಾಟಕದ ವಿರುದ್ಧ ಸೋಮವಾರ ಇಲ್ಲಿ ಆರಂಭಗೊಂಡ ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ ತಂಡದ ಬ್ಯಾಟಿಂಗ್‌ಗೆ ಮಂದ ಬೆಳಕು ಅಡ್ಡಿಯಾಗಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರೈಲ್ವೇಸ್ ತಂಡ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸುವಷ್ಟರಲ್ಲಿ ಮಂದ ಬೆಳಕಿನಿಂದಾಗಿ ಆಟ ಸ್ಥಗಿತ ಗೊಂಡಿತು. 29 ರನ್ ಗಳಿಸಿದ ಅವಿನಾಶ್ ಯಾದವ್ ಔಟಾಗದೆ ಕ್ರೀಸ್‌ನಲ್ಲಿದ್ದರು.

ಕರ್ನಾಟಕದ ಪ್ರತೀಕ್ ಜೈನ್(14ಕ್ಕೆ 4) ಮತ್ತು ಅಭಿಮನ್ಯು ಮಿಥುನ್(18ಕ್ಕೆ 2) ದಾಳಿಗೆ ತತ್ತರಿಸಿದ ರೈಲ್ವೇಸ್ 2.2 ಓವರ್‌ಗಳಲ್ಲಿ 5 ರನ್ ಸೇರಿಸುವಷ್ಟರಲ್ಲಿ ಮೊದಲ ವಿಕೆಟ್ ಕೈ ಚೆಲ್ಲಿತ್ತು. ಅಶೀಷ್ ಶೆಹ್ರಾವತ್ ಅವರು ಮಿಥುನ್ ದಾಳಿಯನ್ನು ಎದುರಿಸಲಾರದೆ ಶ್ರೀನಿವಾಸ್ ಶರತ್‌ಗೆ ಕ್ಯಾಚ್ ನೀಡಿದರು. ಅವರು 11 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲಿಲ್ಲ. ಮೃನಾಲ್ ದೇವಧರ್ 30 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 12 ರನ್ ಗಳಿಸಿದ್ದಾಗ ಅವರನ್ನು ಪ್ರತೀಕ್ ಜೈನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

 ಸೌರಭ್ ಸಿಂಗ್ ತಂಡದ ಬ್ಯಾಟಿಂಗ್‌ನ್ನು ಆಧರಿಸಲು ಯತ್ನಿಸಿದರು. 48 ಎಸೆತಗಳನ್ನು ಎದುರಿಸಿದರೂ ಅವರಿಗೆ 7 ರನ್(1ಬೌ) ಗಳಿಸಲು ಸಾಧ್ಯವಾಯಿತು. ಪ್ರತೀಕ್ ಜೈನ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.

  ಮಹೇಶ್ ರಾವತ್(0) ಮತ್ತು ವಿಕೆಟ್ ಕೀಪರ್ ದಿನೇಶ್ ಮೋರ್(4) ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಪ್ರತೀಕ್ ಜೈನ್ ಅವಕಾಶ ನೀಡಲಿಲ್ಲ. 19 ಓವರ್‌ಗಳಲ್ಲಿ 29ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡ ರೈಲ್ವೇಸ್ ತಂಡಕ್ಕೆ ಆಸರೆಯಾದ ನಾಯಕ ಅರೀಂದಮ್ ಘೋಷ್ (ಔಟಾಗದೆ 32) ಮತ್ತು ಅವಿನಾಶ್ ಯಾದವ್ (ಔಟಾಗದೆ 29) ಮುರಿಯದ ಜೊತೆಯಾಟದಲ್ಲಿ 53 ರನ್‌ಗಳನ್ನು ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News