ಜಿಬ್ರಾಲ್ಟರ್ ಚೆಸ್: ಮಾಜಿ ವಿಶ್ವ ಚಾಂಪಿಯನ್ ಟೋಪಲೋವ್‌ಗೆ ಶಾಕ್ ನೀಡಿದ ಪ್ರಜ್ಞಾನಂದ

Update: 2020-01-27 17:30 GMT

ಜಿಬ್ರಾಲ್ಟರ್, ಜ.27: ಭಾರತದ ಕಿರಿಯ ವಯಸ್ಸಿನ ಗ್ರಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ 18ನೇ ಆವೃತ್ತಿಯ ಜಿಬ್ರಾಲ್ಟರ್ ಚೆಸ್ ಫೆಸ್ಟಿವಲ್‌ನ ಆರನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ವೆಸೆಲಿನ್ ಟೋಪಲೋವ್‌ಗೆ ಸೋಲುಣಿಸಿ ಶಾಕ್ ನೀಡಿದರು. ಈ ಮೂಲಕ ಸತತ ಐದನೇ ಗೆಲುವು ದಾಖಲಿಸಿದರು.

ಚೆನ್ನೈನ 14ರ ಹರೆಯದ ಪ್ರಜ್ಞಾನಂದ ಬಲ್ಗೇರಿಯದ ಟೋಪಲೋವ್‌ರನ್ನು 5-4 ಅಂತರದಿಂದ ಮಣಿಸಿದರು. ಕೇವಲ 33 ನಡೆಯಲ್ಲಿ ಈ ಸಾಧನೆ ಮಾಡಿದರು. ಸಹ ಚೆಸ್ ಪಟು ಪಿ.ವಿ. ನಂಧಿದಾ ವಿರುದ್ಧ ಸೋಲುವ ಮೂಲಕ ಆಟ ಆರಂಭಿಸಿದ ಪ್ರಜ್ಞಾನಂದ ಆ ನಂತರ ಗೆಲುವಿನ ಹಾದಿಯಲ್ಲಿ ಮುನ್ನಡೆದರು.

‘‘ಟೋಪಲೋವ್ ವಿರುದ್ಧ ತಯಾರಿ ನಡೆಸುವುದು ತುಂಬಾ ಕಷ್ಟಕರ’’ಎಂದು ಇತ್ತೀಚೆಗೆ ವರ್ಲ್ಡ್ ಅಂಡರ್-18 ಪ್ರಶಸ್ತಿ ಜಯಿಸಿದ್ದ ಪ್ರಜ್ಞಾನಂದ ಹೇಳಿದ್ದಾರೆ. ಪ್ರಜ್ಞಾನಂದ ಇತರ ಆರು ಆಟಗಾರರ ಪೈಕಿ ಐದು ಅಂಕವನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಏಳನೇ ಸುತ್ತಿನಲ್ಲಿ ಚೀನಾದ ಗ್ರಾಂಡ್‌ಮಾಸ್ಟರ್ ವಾಂಗ್ ಹಾವೊರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News