ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಒಡಿಶಾ ಆತಿಥ್ಯ

Update: 2020-01-27 17:37 GMT

ಹೊಸದಿಲ್ಲಿ, ಜ.27: ಭಾರತದ ಹಾಕಿ ಹಬ್ ಒಡಿಶಾ ಫೆ.22ರಿಂದ ಮಾ.1ರ ತನಕ ಮೊದಲ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನ ಆತಿಥ್ಯವಹಿಸಿಕೊಳ್ಳಲಿದೆ ಎಂದು ರಾಜ್ಯ ಕ್ರೀಡಾ ಸಚಿವೆ ತುಷಾರ್‌ಕಾಂತಿ ಬೆಹೆರಾ ಸೋಮವಾರ ತಿಳಿಸಿದ್ದಾರೆ.

100 ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸಲಿರುವ ಸ್ಪರ್ಧಾವಳಿಯು ಭುವನೇಶ್ವರದಲ್ಲಿ ನಡೆಯಲಿದೆ. ಕಳೆದ ವರ್ಷ ನಡೆದ ಒಲಿಂಪಿಕ್ಸ್ ಕ್ವಾಲಿಫೈಯರ್ ಸಹಿತ ಹಲವು ಪ್ರಮುಖ ಹಾಕಿ ಟೂರ್ನಿಗಳಿಗೆ ಭುವನೇಶ್ವರ ಆತಿಥ್ಯವಹಿಸಿದೆ.

ಈ ತಿಂಗಳಾರಂಭದಲ್ಲಿ ಗುವಾಹಟಿಯಲ್ಲಿ ಮೂರನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಡೆದ ಬಳಿಕ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನ ಮೂಲಕ ಒಡಿಶಾದ ಬ್ರಾಂಡ್ ವೌಲ್ಯ ಹೆಚ್ಚಿಸಲು ಅಧಿಕಾರಿಗಳು ಎದುರು ನೋಡುತ್ತಿದ್ದಾರೆ ಎಂದು ತುಷಾರ್ ಕಾಂತಿ ಹೇಳಿದ್ದಾರೆ.

 ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ ್ಸನಲ್ಲಿ ಭಾಗವಹಿಸಲಿರುವ ಸ್ಪರ್ಧಾಳುಗಳ ಸಂಖ್ಯೆ ಅತ್ಯಂತ ಅಧಿಕವಿದೆ. 17 ಸ್ಪರ್ಧೆಗಳಲ್ಲಿ ಸುಮಾರು 4,000 ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆಯಿದೆ. ಹೆಚ್ಚಿನ ಅಥ್ಲೀಟ್‌ಗಳು 17ರಿಂದ 25 ವಯಸ್ಸಿನವರಾಗಿದ್ದಾರೆ. ಹೆಚ್ಚಿನ ಎಲ್ಲಾ ಯುನಿವರ್ಸಿಟಿಗಳು ಗೇಮ್ಸ್‌ನಲ್ಲಿ ಭಾಗವಹಿಸುತ್ತಿವೆ. ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಲಿರುವ ಕೆಲವು ಅಥ್ಲೀಟ್‌ಗಳು 2020ರ ಒಲಿಂಪಿಕ್ಸ್‌ನಲ್ಲೂ ಭಾಗವಹಿಸುತ್ತಿದಾರೆ. ರಾಜ್ಯ 9 ಉನ್ನತ ಪ್ರದರ್ಶನ ಕೇಂದ್ರವನ್ನು ನಿರ್ಮಿಸಿದ್ದು, ಮುಂದಿನ ಆರು ತಿಂಗಳುಗಳಲ್ಲಿ ಇನ್ನೂ ಮೂರು ಸೆಂಟರ್‌ಗಳನ್ನು ನಿರ್ಮಿಸಲಿದೆ ಎಂದು ಬೆಹೆರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News