ರಾಜಸ್ಥಾನದ ಕ್ರಿಕೆಟಿಗ ವಿನೀತ್ ಸಕ್ಸೇನ ನಿವೃತ್ತಿ

Update: 2020-01-28 17:14 GMT

ಜೈಪುರ, ಜ.28: ದ್ವಿಶತಕ ಸಿಡಿಸಿ ರಾಜಸ್ಥಾನ ಕ್ರಿಕೆಟ್ ತಂಡ 2011-12ರಲ್ಲಿ ರಣಜಿ ಟ್ರೋಫಿ ಜಯಿಸಲು ನೆರವಾಗಿದ್ದ ರಾಜಸ್ಥಾನದ ಕ್ರಿಕೆಟಿಗ ವಿನೀತ್ ಸಕ್ಸೇನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

39ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ವಿನೀತ್ 1988-89ರಲ್ಲಿ ಬಂಗಾಳದ ವಿರುದ್ಧ ರಣಜಿ ಯಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. 2018-19ರಲ್ಲಿ ಉತ್ತರಾಖಂಡದ ಪರ ವಿದರ್ಭದ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.

ಸಕ್ಸೇನ ರಾಜಸ್ಥಾನದ ಪರ 100 ಹಾಗೂ ಅದಕ್ಕಿಂತ ಹೆಚ್ಚು ರಣಜಿ ಪಂದ್ಯಗಳಲ್ಲಿ ಆಡಿದ ಏಕೈಕ ಕ್ರಿಕೆಟಿಗನಾಗಿದ್ದಾರೆ. ವೃತ್ತಿಜೀವನದಲ್ಲಿ ರಾಜಸ್ಥಾನ, ರೈಲ್ವೇಸ್ ಹಾಗೂ ಉತ್ತರಾಖಂಡದ ಪರ ಆಡಿದ್ದ ಸಕ್ಸೇನ 129 ಪಂದ್ಯಗಳಲ್ಲಿ 7,637 ರನ್ ಗಳಿಸಿದ್ದರು. ಇದರಲ್ಲಿ ಒಂದು ದ್ವಿಶತಕ, 17 ಶತಕ ಹಾಗೂ 38 ಅರ್ಧಶತಕಗಳಿವೆ.

2011-12ರ ಋತುವಿನಲ್ಲಿ ತಮಿಳುನಾಡು ವಿರುದ್ಧ 257 ರನ್ ಗಳಿಸಿದ್ದು ಸಕ್ಸೇನ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಕ್ಸೇನ ಅವರು ರಾಜಸ್ಥಾನ ಸತತ 2ನೇ ಬಾರಿ ರಣಜಿ ಟ್ರೋಫಿ ಜಯಿಸಲು ನೆರವಾಗಿದ್ದರು. ಅಂಡರ್-19 ವಿಭಾಗದಲ್ಲಿ ಶ್ರೀಲಂಕಾದ ವಿರುದ್ಧ ಭಾರತವನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News